ಹಿರಿಯರ ಆಶಯ ಸಾರ್ಥಕಗೊಳಿಸಿ

ಉಡುಪಿಯ ಗುಂಡಿಬೈಲಿನಲ್ಲಿ ಯಕ್ಷಗಾನ ಕಲಾಕ್ಷೇತ್ರದ ಸಂಸ್ಥಾಪನಾ ದಿನದ ನಿಮಿತ್ತ ಭೋಜಪ್ಪ ಸಾಲ್ಯಾನ್​ ಅವರನ್ನು ಸನ್ಮಾನಿಸಲಾಯಿತು. ಬನ್ನಂಜೆ ಬಾಬು ಅಮೀನ್​, ಯು.ವಿಶ್ವನಾಥ್​ ಶೆಣೈ, ಕೇಶವಮೂರ್ತಿ ಬೆಲ್ಪತ್ರೆ, ನಿಟ್ಟೂರು ಮಹಾಬಲ್​ ಶೆಟ್ಟಿ, ಜಿ.ಬಾಬು ಗೌಡ, ಅಣ್ಣಯ್ಯ ಪಾಲನ್​, ಶಿವ ಪಾಲನ್​, ಸುವರ್ಣ ಬನ್ನಂಜೆ, ನಾಗರಾಜ್​ ಉಪಾಧ್ಯ ಮಾರ್ಪಳ್ಳಿ ಇದ್ದರು.
ಉಡುಪಿಯ ಗುಂಡಿಬೈಲಿನಲ್ಲಿ ಯಕ್ಷಗಾನ ಕಲಾಕ್ಷೇತ್ರದ ಸಂಸ್ಥಾಪನಾ ದಿನದ ನಿಮಿತ್ತ ಭೋಜಪ್ಪ ಸಾಲ್ಯಾನ್​ ಅವರನ್ನು ಸನ್ಮಾನಿಸಲಾಯಿತು. ಬನ್ನಂಜೆ ಬಾಬು ಅಮೀನ್​, ಯು.ವಿಶ್ವನಾಥ್​ ಶೆಣೈ, ಕೇಶವಮೂರ್ತಿ ಬೆಲ್ಪತ್ರೆ, ನಿಟ್ಟೂರು ಮಹಾಬಲ್​ ಶೆಟ್ಟಿ, ಜಿ.ಬಾಬು ಗೌಡ, ಅಣ್ಣಯ್ಯ ಪಾಲನ್​, ಶಿವ ಪಾಲನ್​, ಸುವರ್ಣ ಬನ್ನಂಜೆ, ನಾಗರಾಜ್​ ಉಪಾಧ್ಯ ಮಾರ್ಪಳ್ಳಿ ಇದ್ದರು.
Published on

* ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್​ ಕರೆ

* ಯಕ್ಷಗಾನ ಕಲಾಕ್ಷೇತ್ರದ ಸಂಸ್ಥಾಪನಾ ದಿನಾಚರಣೆ 

ಉಡುಪಿ: ಯಕ್ಷಗಾನ ಕಲಾಕ್ಷೇತ್ರದ ಸ್ಥಾಪಕರು ಹಾಗೂ ಅದನ್ನು 75 ವರ್ಷಗಳ ಕಾಲ ಮುನ್ನಡೆಸಿಕೊಂಡು ಬಂದ ಮಹನೀಯರನ್ನು ನಾವು ಸ್ಮರಿಸಿಕೊಳ್ಳುವುದು ನಮ್ಮ ಕರ್ತವ್ಯ. ನಿರಂತರ ಕಲಾ ಚಟುವಟಿಕೆ ಆಯೋಜಿಸುವ ಮೂಲಕ ಹಿರಿಯರ ಆಶಯ ಸಾರ್ಥಕಗೊಳಿಸುವ ಕಾರ್ಯ ಆಡಳಿತ ಮಂಡಳಿಯಿಂದ ನಡೆಯಲಿ ಎಂದು ಹಿರಿಯ ಜಾನಪದ ವಿದ್ವಾಂಸ, ಅಮೃತ ಮಹೋತ್ಸವ ಸಮಿತಿಯ ಸಂಚಾಲಕ ಬನ್ನಂಜೆ ಬಾಬು ಅಮೀನ್​ ಆಶಯ ವ್ಯಕ್ತಪಡಿಸಿದರು.
ಉಡುಪಿಯ ಗುಂಡಿಬೈಲಿನಲ್ಲಿ ಯಕ್ಷಗಾನ ಕಲಾಕ್ಷೇತ್ರದ 76ನೇ ಸಂಸ್ಥಾಪನಾ ದಿನಾಚರಣೆ ನಿಮಿತ್ತ ಸಂಸ್ಥೆಯ ಸುವರ್ಣ ಮಹೋತ್ಸವ ಸಭಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂಸ್ಥಾಪನಾ ದಿನಾಚರಣೆ ನಿಮಿತ್ತ ಗಜಾನನ ಯಕ್ಷಗಾನ ಕಲಾಮಂಡಳಿ ತೊಟ್ಟಂನ ಸ್ಥಾಪಕ ಭೋಜಪ್ಪ ಸಾಲ್ಯಾನ್​ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಲಾಕ್ಷೇತ್ರದ ಪೋಷಕ ಯು.ವಿಶ್ವನಾಥ್​ ಶೆಣೈ, ಉಪಾಧ್ಯಕ್ಷ ನಿಟ್ಟೂರು ಮಹಾಬಲ್​ ಶೆಟ್ಟಿ, ಮಾಜಿ ಅಧ್ಯಕ್ಷ ಜಿ.ಬಾಬು ಗೌಡ, ಹಿರಿಯ ಸದಸ್ಯರಾದ ಅಣ್ಣಯ್ಯ ಪಾಲನ್​, ಶಿವ ಪಾಲನ್​, ಗುರು ಸುವರ್ಣ ಬನ್ನಂಜೆ, ನಾಗರಾಜ್​ ಉಪಾಧ್ಯ ಮಾರ್ಪಳ್ಳಿ ಉಪಸ್ಥಿತರಿದ್ದರು.
ಸಂಸ್ಥೆಯ ಕೋಶಾಧಿಕಾರಿ ನರಸಿಂಹ ಎನ್​.ಆರ್​., ಕಲಾ ಕಾರ್ಯದರ್ಶಿ ಶ್ರೀಧರ್​ ಭಟ್​, ಕಾರ್ಯಕಾರಿ ಸದಸ್ಯರಾದ ರಮೇಶ್​ ಕೋಟ್ಯಾನ್​, ಅನಿಲ್​ ಕುಮಾರ್​ ಅಡೂರು, ಸುಗಂಧಿ ಆಚಾರ್ಯ ಪಾಲ್ಗೊಂಡಿದ್ದರು.
ಸಂಸ್ಥೆಯ ಅಧ್ಯಕ್ಷ ಕೇಶವಮೂರ್ತಿ ಬೆಲ್ಪತ್ರೆ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಡಾ.ರಮೇಶ್​ ಚಿಂಬಾಲ್ಕರ್​ ವಂದಿಸಿದರು. ಕಾರ್ಯದರ್ಶಿ ಗಣೇಶ್​ ಕೋಟ್ಯಾನ್​ ಕಾರ್ಯಕ್ರಮ ನಿರೂಪಿಸಿದರು.
ಸಭಾಕಾರ್ಯಕ್ರಮದ ಬಳಿಕ ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ 'ತ್ರಿಶಂಕು ಚರಿತ್ರೆ' ಯಕ್ಷಗಾನ ತಾಳಮದ್ದಳೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net