ಮಕ್ಕಳ ಬೆಳವಣಿಗೆಗೆ ಯಕ್ಷಗಾನ ಸಹಕಾರಿ

ಕಲ್ಗೋಳಿ ಬೈದೆಬೆಟ್ಟು ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಸಂದ 6ನೇ ವರ್ಷದ ವಾರ್ಷಿಕೋತ್ಸವ ಹಾಗೂ ಹೆಜ್ಜೆನಾದ ಚಿಣ್ಣರ ಕಲಾ ತಂಡದ ವಿದ್ಯಾರ್ಥಿಗಳ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಜರುಗಿತು. ಅಶೋಕ್ ಕುವಾರ್ ಶೆಟ್ಟಿ, ನವೀನ್ ಕುವಾರ್ ಬಿ., ಕೆ.ಶಶಿಧರ ಶೆಟ್ಟಿ, ರಶ್ಮಿ ಸಂತೋಷ್ ಹೆಗ್ಡೆ, ಉಮೇಶ್ ಪೂಜಾರಿ ಮತ್ತಿತರರು ಇದ್ದರು.

Published on
ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ
ರಾಮಾಯಣ, ಮಹಾಭಾರತ ಗ್ರಂಥಗಳನ್ನು ಓದುವುದರಿಂದ ಧಾರ್ಮಿಕ ಪ್ರಜ್ಞೆ ಬೆಳೆಯುತ್ತದೆ. ಯಕ್ಷಗಾನ ಕಲೆಯಿಂದ ಉಡುಪಿ ಮತ್ತು ದಕ್ಷಿಣಕನ್ನಡ ಜಿಲ್ಲೆ ಬಹಳ ಎತ್ತರಕ್ಕೆ ಬೆಳೆದಿದೆ. ಪುರಾಣ ಕಥೆಗಳನ್ನು ಕೇಳುವುದರಿಂದ, ಯಕ್ಷಗಾನದಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಉತ್ತಮ ಬೆಳವಣಿಗೆ ಕಾಣಬಹುದು ಎಂದು ಉಡುಪಿ ಜಿಲ್ಲಾ ಅನುದಾನಿತ ಶಿಕ್ಷಕರ ಸಂ ಅಧ್ಯಕ್ಷ ಅರುಣ್ ಕುಮಾರ್ ಶೆಟ್ಟಿ ಹೇಳಿದರು.
ಬೈದೆಬೆಟ್ಟು ಶ್ರೀರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಕಲ್ಗೋಳಿ ಬೈದೆಬೆಟ್ಟು ಚಿತ್ತೇರಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಸಂಘದ 6ನೇ ವಾರ್ಷಿಕೋತ್ಸವ ಹಾಗೂ ಹೆಜ್ಜೆನಾದ ಚಿಣ್ಣರ ಕಲಾ ತಂಡದ ವಿದ್ಯಾರ್ಥಿಗಳ 2ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲ್ಗೋಳಿ ಬೈದೆಬೆಟ್ಟು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ರತ್ನಾಕರ ಆಚಾರ್ಯ ಕಲ್ಗೋಳಿ ಅಧ್ಯಕ್ಷತೆ ವಹಿಸಿದ್ದರು.
ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ, ಕಳ್ತೂರು ಕೆಂಜೂರು ಗ್ರಾಪಂ ಅಧ್ಯಕ್ಷ ನವೀನ್ ಕುವಾರ್ ಬಿ., ಪ್ರಮುಖರಾದ ಕೆ.ಶಶಿಧರ ಶೆಟ್ಟಿ, ರಶ್ಮಿ ಸಂತೋಷ್ ಹೆಗ್ಡೆ, ಉಮೇಶ್ ಪೂಜಾರಿ, ಸುರೇಶ್ ಶೆಟ್ಟಿ, ವಸಂತ ಕುಮಾರ್, ಉದಯ್ ಜೋಗಿ, ಸಂತೋಷ್ ಕುಲಾಲ್, ಸದಾಶಿವ ಪೂಜಾರಿ, ಕೀರ್ತಿ ಜೋಗಿ, ವಿಶ್ವನಾಥ ಆಚಾರ್ಯ, ವತ್ಸಲಾ ದಯಾನಂದ ಶೆಟ್ಟಿ, ವಸಂತ ಬಲ್ಲೆಗುಡ್ಡೆ, ಭಾಸ್ಕರ ಆಚಾರ್ಯ, ರಮೇಶ್ ಪೂಜಾರಿ, ಮಾಧವ ಪೈ ಬೈದೆಬೆಟ್ಟು ಮತ್ತಿತರರು ಉಪಸ್ಥಿತರಿದ್ದರು.
ಶಾಂತರಾಜ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಗಣೇಶ್ ಕಲ್ಗೋಳಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net