ಯಕ್ಷಗಾನ ಕಲಾವಿದ ನೇಣು ಬಿಗಿದು ಆತ್ಮಹತ್ಯೆ

 ಜಯೇಂದ್ರ ಕೆ.
ಜಯೇಂದ್ರ ಕೆ.
Published on

ಕಾಸರಗೋಡು: ಯಕ್ಷಗಾನ ಕಲಾವಿದ, ಸಾರಣೆ ಮೇಸ್ತ್ರಿ ಕೆಲಸ ನಿರ್ವಹಿಸುತ್ತಿದ್ದ ಕಿದೂರು ದಂಡೆಗೋಳಿ ಮಂಜಲ್ಪಡ್ಪು ನಿವಾಸಿ ಜಯೇಂದ್ರ ಕೆ.(54) ಎಂಬುವರು ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮನೆಯಲ್ಲಿ ಒಬ್ಬರೇ ಇದ್ದಾಗ ಆತ್ಮಹತ್ಯೆ ಮಾಡಿಕೊಂಡಿದ್ದು, ಮನೆಯವರು ಸಂಜೆ ವೇಳೆ ವಾಪಸ್ ಬಂದಾಗ ನೇಣಿನ ಹಗ್ಗ ತುಂಡಾಗಿ ಕೊಠಡಿಯಲ್ಲಿ ಬಿದ್ದ ಸ್ಥಿತಿಯಲ್ಲಿದ್ದರು. ತಕ್ಷಣ ಚೆಂಗಳದ ಆಸ್ಪತ್ರೆಗೆ ದಾಖಲಿಸಿದರೂ ಅಷ್ಟರಲ್ಲಾಗಲೇ ಮೃತಟ್ಟಿದ್ದರು.

ಯಕ್ಷಗಾನ ಹಾಸ್ಯಕಲಾವಿದರಾಗಿದ್ದ ಅವರು, ಸುಂಕದಕಟ್ಟೆ ಮೇಳದಲ್ಲಿ ಆರು ವರ್ಷ ಕಾಲ ಯಕ್ಷಗಾನ ಕಲಾವಿದರಾಗಿ ಸೇವೆ ಸಲ್ಲಿಸಿದ್ದು, ನಂತರ ಊರಿನಲ್ಲಿ ಸಾರಣೆ ಮೇಸ್ತ್ರಿಯಾಗಿ ಕೆಲಸ ಮಾಡಿಕೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net