ಯುವಜನಾಂಗಕ್ಕೆ ಸಂಸ್ಕಾರ ದಾಟಿಸುವ ಕೆಲಸ ಅಗತ್ಯ: ಶಾಸಕ ಗುರ್ಮೆ

ಯಕ್ಷಶಿಕ್ಷಣ ಸನಿವಾಸ ಶಿಬಿರ ಸಮಾರೋಪ ಸಮಾರಂಭ.
ಯಕ್ಷಶಿಕ್ಷಣ ಸನಿವಾಸ ಶಿಬಿರ ಸಮಾರೋಪ ಸಮಾರಂಭ.
Published on
ಉಡುಪಿ: ಭಾರತ ವಿಶ್ವದಲ್ಲೇ ಅತ್ಯಂತ ಯುವ ದೇಶ. ಜನಸಂಖ್ಯೆಯಲ್ಲಿ ಶೇ.50ಕ್ಕಿಂತ ಹೆಚ್ಚು ಮಂದಿ ಯುವಕರಿದ್ದಾರೆ. ಹೀಗಾಗಿ ಯುವ ಜನಾಂಗಕ್ಕೆ ಭಾರತೀಯ ಸಂಸತಿ ಮತ್ತು ಸಂಸ್ಕಾರವನ್ನು ದಾಟಿಸುವ ಕೆಲಸ ಅತೀ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಲಾರಂಗ ಮಾದರಿ ಕಾರ್ಯಗಳನ್ನು ಮಾಡುತ್ತಿದೆ ಎಂದು ಶಾಸಕ ಗುರ್ಮೆ ಸುರೇಶ್​ ಶೆಟ್ಟಿ ಹೇಳಿದರು.
ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ಯಕ್ಷಶಿಕ್ಷಣ ಟ್ರಸ್ಟ್​ ವತಿಯಿಂದ ಭೀಮ ಗೋಲ್ಡ್​ ಪ್ರಾಯೋಜಕತ್ವದಲ್ಲಿ ನಡೆದ ಒಂದು ವಾರದ ಯಕ್ಷಶಿಕ್ಷಣ ಸನಿವಾಸ ಶಿಬಿರ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪದವೀಧರ ಯುವಕ&ಯುವತಿಯರು ಸಂವಹನ ಕೊರತೆಯಿಂದ ಉದ್ಯೋಗಕ್ಕೆ ಸೇರುವಾಗ ಸಂದರ್ಶನದಲ್ಲಿ ಸೋಲುತ್ತಿದ್ದಾರೆ. ಹೀಗಾಗಿ ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಯಕ್ಷಶಿಕ್ಷಣ ತರಬೇತಿಯಲ್ಲಿ ನಡೆಯುತ್ತಿದೆ ಎಂದು ಶ್ಲಾಘಿಸಿದರು.

ಗುರು ಬನ್ನಂಜೆ ಸಂಜೀವ ಸುವರ್ಣ, ಉದ್ಯಾವರ ಪಶುವೈದ್ಯಾಧಿಕಾರಿ ಡಾ. ಸಂದೀಪ್​ ಶೆಟ್ಟಿ, ರವೀಂದ್ರ ಶೆಟ್ಟಿ ಕೊಲ್ಲಬೆಟ್ಟು, ಹಿರಿಯಡಕದ ಉದ್ಯಮಿ ಶ್ರೀನಿವಾಸ ರಾವ್​, ಭೀಮ ಜುವೆಲ್ಲರಿ ಮ್ಯಾನೇಜರ್​ ರಾವೇಂದ್ರ ಭಟ್​, ಪಣಂಬೂರು ವಾಸುದೇವ ಐತಾಳ್​, ಕಲಾರಂಗ ಉಪಾಧ್ಯಕ್ಷ ವಿ.ಜಿ. ಶೆಟ್ಟಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮಕ್ಕೆ ಪೂರ್ವದಲ್ಲಿ ಯಕ್ಷಶಿಕ್ಷಣ ತರಬೇತಿ ಪಡೆದ 103 ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರಾತ್ಯಕ್ಷಿಕೆ ನಡೆಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net