ಯಕ್ಷಕಲಾವಿದರಿಗೆ ಸರ್ಕಾರ ನೆರವು ಅಗತ್ಯ

ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಯಕ್ಷಕಲಾ ಟ್ರಸ್ಟ್‌ನ ದಶವಾನೋತ್ಸವ ಸವಾರಂಭವನ್ನು ಡಾ.ಅಶೋಕ ಶೆಟ್ಟಿ ಉದ್ಘಾಟಿಸಿದರು.
ಉಪ್ಪುಂದ ಶ್ರೀ ದುರ್ಗಾಪರಮೇಶ್ವರೀ ಯಕ್ಷಕಲಾ ಟ್ರಸ್ಟ್‌ನ ದಶವಾನೋತ್ಸವ ಸವಾರಂಭವನ್ನು ಡಾ.ಅಶೋಕ ಶೆಟ್ಟಿ ಉದ್ಘಾಟಿಸಿದರು.
Published on

ವಿಜಯವಾಣಿಸುದ್ದಿಜಾಲ ಬೈಂದೂರು

ಆಧುನಿಕವಾಧ್ಯಮಗಳಿಂದ ನೈಜ ಯಕ್ಷಗಾನಕಲಾವಿದರ ಬದುಕು ಹೈರಾಣಾಗಿದೆ.ಹಲವುಮೇಳಗಳಲ್ಲಿ ಕಲಾವಿದರಿಗೆ ಉತ್ತಮಸೌಲಭ್ಯಗಳಿದ್ದು,ಇನ್ನೂಹಲವು ಮೇಳಗಳ ಕಲಾವಿದರಿಗೆ ಜೀವನನಡೆಸುವುದೇ ಕಷ್ಟವಾಗಿದೆ.ಸರ್ಕಾರಬಡ ಕಲಾವಿದರ ನೆರವಿಗೆ ಧಾವಿಸಿಸವಲತ್ತುಗಳನ್ನು ಕಲ್ಪಿಸಿಕೊಡಬೇಕುಎಂದು ಆಜ್ರಿ ಚೋನಮನೆ ಕ್ಷೇತ್ರದಧರ್ಮದರ್ಶಿ ಡಾ.ಅಶೋಕಶೆಟ್ಟಿ ಒತ್ತಾಯಿಸಿದರು.

ಉಪ್ಪುಂದ ಮಾತಶ್ರೀ ಸಭಾಭವನದಲ್ಲಿ ಆಯೋಜಿಸಿದ್ದ ಶ್ರೀ ದುರ್ಗಾಪರಮೇಶ್ವರಿಯಕ್ಷಕಲಾ ಟ್ರಸ್ಟ್ ದಶಮಾನೋತ್ಸವಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಟ್ರಸ್ಟ್ಅಧ್ಯಕ್ಷ ಶ್ರೀಧರ ದೇವಾಡಿಗಅಧ್ಯಕ್ಷತೆ ವಹಿಸಿದ್ದರು.ಯಕ್ಷಗಾನಕಲಾವಿದ ಬಿಜೂರು ವಿಶ್ವೇಶ್ವರಅಡಿಗ ಅವರನ್ನು ಸನ್ಮಾನಿಸಲಾಯಿತು.ಮಂಜುದೇವಾಡಿಗ,ಸಿ.ಎನ್.ಬಿಲ್ಲವ,ಸುಬ್ರಹ್ಮಣ್ಯಜಿ.ಉಪ್ಪುಂದ,ಯುಎ.ಮಂಜುದೇವಾಡಿಗ,ಕೇಶವದೇವಾಡಿಗ ಉಪಸ್ಥಿತರಿದ್ದರು.

ಗಣೇಶದೇವಾಡಿಗ ಸ್ವಾಗತಿಸಿದರು.ನಾರಾಯಣಬಿಜೂರು ಪ್ರಸ್ತಾವನೆಗೈದರು.ಸುಧಾಕರದೇವಾಡಿಗ ಕಾರ್ಯಕ್ರಮ ನಿರೂಪಿಸಿದರು.ಸ್ಥಳೀಯಮಕ್ಕಳಿಂದ ನತ್ಯ ವೈವಿಧ್ಯ,ಯಕ್ಷಕಲಾಟ್ರಸ್ಟ್ ಕಲಾವಿದರಿಂದ ಯಕ್ಷಗಾನಪ್ರದರ್ಶನಗೊಂಡಿತು.

"

ಯಕ್ಷಗಾನವು ಎಲ್ಲ ವರ್ಗದ ಪ್ರೇಕ್ಷಕರು ಇಷ್ಟಪಡುವ ಕರಾವಳಿಯ ಹೆಮ್ಮೆಯ ಕಲೆ. ಹಿಂದಿನ ತಲೆವಾರಿನ ಕಲಾವಿದರು ಅತ್ಯಂತ ಸಂಕಷ್ಟದಲ್ಲೂ ಯಕ್ಷಗಾನ ಉಳಿಸಿ ನಮ್ಮ ತಲೆವಾರಿಗೆ ಹಸ್ತಾಂತರಿಸಿದರು. ಮಕ್ಕಳಿಗೆ, ಯುವಕರಿಗೆ ತರಬೇತಿ ನೀಡಿ, ಅವರಿಂದ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಮುಂದಿನ ತಲೆವಾರಿಗೆ ಅದನ್ನು ವರ್ಗಾಯಿಸುವ ಅನಿವಾರ್ಯತೆ ಸಂ ಸಂಸ್ಥೆಗಳ ಮುಂದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net