ಅಂತರಂಗ ಅರಳಿದರೆ ಅನುಭವ ಪ್ರಪಂಚ ಜನನ

ಉಡುಪಿಯ ಜಿಲ್ಲಾ ಗ್ರಂಥಾಲಯದಲ್ಲಿ ಆಯೋಜಿಸಿದ್ದ 'ಸಾಹಿತಿ ಸೌರಭ' ಕಾರ್ಯಕ್ರಮವನ್ನು ವಸಂತಿ ಶೆಟ್ಟಿ ಬ್ರಹ್ಮಾವರ ಉದ್ಘಾಟಿಸಿದರು. ನೀಲಾವರ ಸುರೇಂದ್ರ ಅಡಿಗ, ನಮಿತಾ ಬಿ., ವನಿತಾ ಕೆ., ಶ್ಯಾಮಲಾ ಇದ್ದರು.
ಉಡುಪಿಯ ಜಿಲ್ಲಾ ಗ್ರಂಥಾಲಯದಲ್ಲಿ ಆಯೋಜಿಸಿದ್ದ 'ಸಾಹಿತಿ ಸೌರಭ' ಕಾರ್ಯಕ್ರಮವನ್ನು ವಸಂತಿ ಶೆಟ್ಟಿ ಬ್ರಹ್ಮಾವರ ಉದ್ಘಾಟಿಸಿದರು. ನೀಲಾವರ ಸುರೇಂದ್ರ ಅಡಿಗ, ನಮಿತಾ ಬಿ., ವನಿತಾ ಕೆ., ಶ್ಯಾಮಲಾ ಇದ್ದರು.
Published on

* ಹಿರಿಯ ಸಾಹಿತಿ ವಸಂತಿ ಶೆಟ್ಟಿ ಬ್ರಹ್ಮಾವರ ಅನಿಸಿಕೆ 

* 'ಸಾಹಿತಿ ಸೌರಭ' ಕಾರ್ಯಕ್ರಮ ಉದ್ಘಾಟನೆ

ಉಡುಪಿ: ನಿತ್ಯ ಜೀವನದ ಅನುಭವಗಳಿಂದ ಸಾಹಿತ್ಯ ಹುಟ್ಟುತ್ತದೆ. ಸಾಹಿತಿಗಳು ನೀತಿ ಬೋಧಕ ಅಥವಾ ಧರ್ಮ ಬೋಧಕರಲ್ಲ. ಆದರೆ, ಸಮಾಜದ ಅಂಕು-ಡೊಂಕುಗಳನ್ನು ತಮ್ಮ ಬರವಣಿಗೆಯ ಮೂಲಕ ತಿದ್ದುವ ಚಿಕಿತ್ಸಕರು. ಕವಿಗಳು ವಿಚಾರದ ಬೆಳಕು ಚೆಲ್ಲಿ ಅಜ್ಞಾನದ ಕತ್ತಲೆ ಹೋಗಲಾಡಿಸುವವರು. ಅಂತರಂಗ ಅರಳಿದಾಗ, ಅನುಭವದ ಪ್ರಪಂಚ ವಿಸ್ತಾರವಾದಾಗ ಸಾಹಿತ್ಯ ಹುಟ್ಟುತ್ತದೆ ಎಂದು ಹಿರಿಯ ಲೇಖಕಿ ವಸಂತಿ ಶೆಟ್ಟಿ ಬ್ರಹ್ಮಾವರ ಅಭಿಪ್ರಾಯಪಟ್ಟರು.
ಉಡುಪಿಯಲ್ಲಿರುವ ವಿದ್ಯಾವಾಚಸ್ಪತಿ ಬನ್ನಂಜೆ ಡಾ. ಗೋವಿಂದಾಚಾರ್ಯ ಸ್ಮಾರಕ ಜಿಲ್ಲಾ ಕೇಂದ್ರ ಗ್ರಂಥಾಲಯದ ಸಭಾಂಗಣದಲ್ಲಿ ಕರ್ನಾಟಕ ಸರ್ಕಾರ ಸಾರ್ವಜನಿಕ ಗ್ರಂಥಾಲಯ ಇಲಾಖೆ ವತಿಯಿಂದ ಗುರುವಾರ (ಸೆ.) ಆಯೋಜಿಸಿದ್ದ 'ಸಾಹಿತಿ ಸೌರಭ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತಾಯಿ ದೊಡ್ಡ ಸಾಹಿತಿ

ಸಾಹಿತಿ ಅಥವಾ ಕವಿ ವ್ಯಥೆಪಡುವುದಿಲ್ಲ. ಅವರಲ್ಲಿ ವ್ಯಥೆಯನ್ನು ಕಥೆ ಮಾಡುವ ಶಕ್ತಿ ಇರುತ್ತದೆ. ತಾಯಿ ತನ್ನ ಚಿಕ್ಕ ಮಕ್ಕಳಿಗೆ ಕಥೆ, ಶಿಶುಗೀತೆ ಹೇಳುತ್ತ ಒಬ್ಬ ದೊಡ್ಡ ಸಾಹಿತಿಯಾಗಿ ರೂಪಗೊಂಡಿರುತ್ತಾಳೆ. ಮಕ್ಕಳಲ್ಲಿ ಓದುವ ಹವ್ಯಾಸ ಇರಬೇಕು, ಬೆಳೆಸಬೇಕು. ಜೀವನದ ಅನುಭವ ಬರೆಯುವ ಅಭ್ಯಾಸ ರೂಢಿಸಿಕೊಳ್ಳಬೇಕು ಎಂದರು.
ಗ್ರಂಥಾಲಯದ ಮುಖ್ಯ ಅಧಿಕಾರಿ (ಪ್ರ) ನಮಿತಾ ಬಿ. ಸ್ವಾಗತಿಸಿದರು. ಜಿಲ್ಲಾ ಕೇಂದ್ರ ಗ್ರಂಥಾಲಯದ ಗ್ರಂಥಪಾಲಕಿ ವನಿತಾ ಕೆ. ವಂದಿಸಿದರು. ಸಿಬ್ಬಂದಿ ಶ್ಯಾಮಲಾ ಪರಿಚಯಿಸಿದರು. ಪ್ರಥಮ ದರ್ಜೆ ಸಹಾಯಕಿ ಪ್ರೇಮಾ ಕಾರ್ಯಕ್ರಮ ನಿರೂಪಿಸಿದರು. ಡಾ.ಜಿ.ಶಂಕರ್​ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು, ಗ್ರಂಥಾಲಯ ಸಿಬ್ಬಂದಿ ಪಾಲ್ಗೊಂಡಿದ್ದರು.
"

ಮಕ್ಕಳಲ್ಲಿ ಓದುವ ಮತ್ತು ಬರೆಯುವ ಸಂಸ್ಕೃತಿ ಬೆಳೆಯಬೇಕು. ಅಲ್ಲದೆ, ಯುವಜನತೆಗೆ ಸಾಹಿತಿಗಳ ಪರಿಚಯವೂ ಆಗಬೇಕು. ಇದಕ್ಕೆ ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ಅವರ ಮುತುವರ್ಜಿಯಲ್ಲಿ ನಡೆಯುತ್ತಿರುವ ಈ 'ಸಾಹಿತಿ ಸೌರಭ' ಕಾರ್ಯಕ್ರಮ ಪೂರಕವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net