ಉಡುಪಿಯ ಜಿಲ್ಲಾ ರೆಡ್ಕ್ರಾಸ್ ಭವನದಲ್ಲಿ ವಿಶ್ವ ರೆಡ್ ಕ್ರಾಸ್ ದಿನ ಆಚರಿಸಲಾಯಿತು. ಡಾ. ಅಶೋಕ್ ವೈ.ಜಿ., ಶ್ರೀಕಾಂತ್ ಶಂಕರನಾರಾಯಣ, ಡಾ. ಗಣನಾಥ ಶೆಟ್ಟಿ ಎಕ್ಕಾರು, ಜಯಶ್ರೀ, ರಮಾದೇವಿ, ಸುಚಿತ್ರಾ ಇತರರಿದ್ದರು.
Published on:
Copied
Follow Us
* ಉಡುಪಿ ಜಿಲ್ಲಾ ಉಪಸಭಾಪತಿ ಡಾ. ಅಶೋಕ್ ವೈ.ಜಿ. ಅನಿಸಿಕೆ
* ವಿಶ್ವ ದಿನಾಚರಣೆ, ಡ್ಯುನಾಂಟ್ ಪ್ರತಿಮೆಗೆ ಮಾಲಾರ್ಪಣೆ
ಉಡುಪಿ: ಅಂತಾರಾಷ್ಟ್ರೀಯ ರೆಡ್ ಕ್ರಾಸ್ ಸಂಸ್ಥೆಯು ಒಂದೂವರೆ ಶತಮಾನಗಳಿಂದ ಜಗತ್ತಿನ ವಿವಿಧೆಡೆ ಮಾನವೀಯ ಸೇವೆ ಸಲ್ಲಿಸುತ್ತಿದ್ದು, ಪ್ರಕೃತಿ ವಿಕೋಪ ಮತ್ತು ಯುದ್ಧ ಸಂದರ್ಭಗಳಲ್ಲಿ ಅದು ಸಲ್ಲಿಸಿದ ಸೇವೆ ಅನನ್ಯ. ಹೀಗಾಗಿಯೇ ನಾಲ್ಕು ಬಾರಿ ನೊಬೆಲ್ ಪ್ರಶಸ್ತಿ ಗಳಿಸಿದೆ. ಉಡುಪಿ ಜಿಲ್ಲಾ ರೆಡ್ ಕ್ರಾಸ್ ಸಂಸ್ಥೆಯು ರಾಜ್ಯದಲ್ಲೇ ಪ್ರತಿಷ್ಠಿತವಾಗಿದೆ ಎಂದು ಉಡುಪಿ ಜಿಲ್ಲಾ ರೆಡ್ ಕ್ರಾಸ್ ಉಪಸಭಾಪತಿ ಡಾ. ಅಶೋಕ್ ವೈ.ಜಿ. ಅನಿಸಿಕೆ ವ್ಯಕ್ತಪಡಿಸಿದರು.
ಉಡುಪಿಯ ಬ್ರಹ್ಮಗಿರಿಯಲ್ಲಿರುವ ಜಿಲ್ಲಾ ರೆಡ್ ಕ್ರಾಸ್ ಘಟಕದಲ್ಲಿ ಶುಕ್ರವಾರ (ಮೇ 8) ಆಯೋಜಿಸಿದ್ದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ನಿಮಿತ್ತ ರೆಡ್ ಕ್ರಾಸ್ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ ಅವರ ಪ್ರತಿಮೆಗೆ ಹಾರ ಅರ್ಪಿಸಿ ಮಾತಾನಾಡಿದರು.
ರೆಡ್ ಕ್ರಾಸ್ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ ಪ್ರತಿಮೆಗೆ ಡಾ. ಅಶೋಕ್ ವೈ.ಜಿ. ಹಾರ ಅರ್ಪಿಸಿದರು.
ಹೈಕೋರ್ಟ್ ವಕೀಲ ಶ್ರೀಕಾಂತ್ ಶಂಕರನಾರಾಯಣ, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿ ಜಯಶ್ರೀ ಉಪಸ್ಥಿತರಿದ್ದರು.
ಜಿಲ್ಲಾ ರೆಡ್ ಕ್ರಾಸ್ನ ಕಾರ್ಯದರ್ಶಿ ಡಾ. ಗಣನಾಥ ಶೆಟ್ಟಿ ಎಕ್ಕಾರು ಸ್ವಾಗತಿಸಿ, ರೆಡ್ ಕ್ರಾಸ್ನ ಇತಿಹಾಸ ವಿವರಿಸಿದರು. ಜಿಲ್ಲಾ ರೆಡ್ ಕ್ರಾಸ್ ಖಜಾಂಚಿ ರಮಾದೇವಿ ವಂದಿಸಿದರು.
ಫಲಾನುಭವಿಗಳಿಗೆ ಶ್ರವಣ ಸಾಧನ ಮತ್ತು ಗೃಹೋಪಯೋಗಿ ಸಾಮಾಗ್ರಿ ವಿತರಿಸಲಾಯಿತು.
ಜಿಲ್ಲಾ ರೆಡ್ ಕ್ರಾಸ್, ಜಿಲ್ಲಾ ವಿಕಲಚೇತನರ ಪುನರ್ವಸತಿ ಕೇಂದ್ರ ಮತ್ತು ವಾರ್ತಾ ಇಲಾಖೆಯ ಸಿಬ್ಬಂದಿ ಸುಚಿತ್ರಾ ಇತರರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಫಲಾನುಭವಿಗಳಿಗೆ ಶ್ರವಣ ಸಾಧನ ಮತ್ತು ಗೃಹೋಪಯೋಗಿ ಸಾಮಾಗ್ರಿ ವಿತರಿಸಲಾಯಿತು.