

ಆನೆಗಳು ನಗರ ಪ್ರದೇಶಕ್ಕೆ ಬರಲು ಕಾರಣಗಳೇನು?
ಆನೆಗಳು ಅತ್ಯಂತ ಬುದ್ಧಿವಂತ ಪ್ರಾಣಿಗಳಾಗಿದ್ದು, ತಲೆಮಾರುಗಳಿಂದ ಒಂದೇ ಜಾಗದಲ್ಲಿ ಸಂಚರಿಸುವ ಹವ್ಯಾಸ ಹೊಂದಿವೆ. ದಿನಕ್ಕೆ 200 ರಿಂದ 300 ಕೆ.ಜಿ ಆಹಾರ ಸೇವಿಸಿ 40 ರಿಂದ 50 ಕಿ.ಮೀ. ಸಂಚರಿಸುತ್ತವೆ. ಕಾಡಿನ ಅಂಚಿನ ಪ್ರದೇಶಗಳಲ್ಲಿ ಕಾಫಿ, ಅಡಿಕೆ ಮತ್ತು ಬಾಳೆ ತೋಟಗಳಂತಹ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದ್ದು, ಕಾಡಿನ ಆಹಾರಕ್ಕಿಂತ ಸುಲಭವಾಗಿ ಸಿಗುವ ತೋಟ ಆಹಾರಕ್ಕಾಗಿ ನಾಡಿಗೆ ಲಗ್ಗೆ ಇಡುತ್ತಿವೆ. ಕರ್ನಾಟಕದಲ್ಲಿ ಸುಮಾರು 6,000ಕ್ಕೂ ಹೆಚ್ಚು ಆನೆಗಳಿದ್ದು, ಕೇವಲ 200 ರಿಂದ 300 ಆನೆಗಳು ಮಾತ್ರ ಈ ರೀತಿ ನಾಡಿಗೆ ಬರುತ್ತಿವೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಮ್ ಬಾಬು ಎಂ. ಹೇಳಿದ್ದಾರೆ.