ಉಡುಪಿಯ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಯಲ್ಲಿ ಪರಿಸರ ದಿನ ಆಚರಿಸಲಾಯಿತು. ಡಾ.ಗಣನಾಥ್ ಶೆಟ್ಟಿ ಎಕ್ಕಾರು, ಗುರುರಾಜ್ ಸನಿಲ್, ಪೂರ್ಣಿಮಾ, ರವಿರಾಜ್ ಎಚ್.ಪಿ., ಜನಾರ್ದನ್ ಕೊಡವೂರು, ರಂಜಿನಿ ವಸಂತ್, ದೀಪಾ ಕರ್ಕಿ, ಡಾ.ರಶ್ಮಿ ಅಮ್ಮೆಂಬಳ, ಜ್ಯೋತಿ ಶೇಟ್, ಸತೀಶ್ ಕೊಡವೂರು, ರಾಘವೇಂದ್ರ ಪ್ರಭು ಕರ್ವಾಲು ಇತರರಿದ್ದರು.
Published on:
Copied
Follow Us
* ಡಾ.ಗಣನಾಥ್ ಶೆಟ್ಟಿ ಎಕ್ಕಾರು ಸಂತಸ
* ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟನೆ
ಉಡುಪಿ: ಡಾ.ಶಿವರಾಮ ಕಾರಂತ ಅವರು ತಮ್ಮ ಕೃತಿಗಳಲ್ಲಿ ಕರಾವಳಿಯ ಪರಿಸರ, ಪ್ರಕೃತಿಯ ಮಹತ್ವ ಸಾರಿದ್ದಾರೆ. ಪರಿಸರದ ಕುರಿತಾಗಿ ಅವರ ಕಾಳಜಿಯು ಯುವ ಜನಾಂಗಕ್ಕೆ ಮಾರ್ಗದರ್ಶಕವಾಗಿದೆ. ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸುವ ಕಾರ್ಯ ಅವರು ಮಾಡಿದ್ದರು. ಹೀಗಾಗಿ ಅವರ ನೆನಪಿನಲ್ಲಿ ಪರಿಸರ ದಿನ ಆಚರಿಸಿರುವುದು ಅರ್ಥಪೂರ್ಣ ಎಂದು ಡಾ.ಶಿವರಾಮ ಕಾರಂತ ಟ್ರಸ್ಟ್ನ ಅಧ್ಯಕ್ಷ ಡಾ.ಗಣನಾಥ್ ಶೆಟ್ಟಿ ಎಕ್ಕಾರು ಸಂತಸ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಡಾ.ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ, "ನಮ್ಮ ಮನೆ-ನಮ್ಮ ಮರ' ಅಭಿಯಾನ ತಂಡ, ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಟಕದ ಅಶ್ರಯದಲ್ಲಿ ಅಲೆವೂರಿನಲ್ಲಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿ ಆವರಣದಲ್ಲಿ ಶುಕ್ರವಾರ (ಜೂ.5) ಆಯೋಜಿಸಿದ್ದ ಕಾರಂತರ ನೆನೆಪಿನಲ್ಲಿ ವಿಶ್ವ ಪರಿಸರ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಖ್ಯಾತ ಉರಗ ತಜ್ಞ ಗುರುರಾಜ್ ಸನಿಲ್ ಮಾತನಾಡಿ, ಪರಿಸರವು ಮಾನವನ ಬದುಕಿನ ಜೀವಧಾತುವಾಗಿದೆ. ಅದನ್ನು ಅರ್ಥ ಮಾಡಿಕೊಂಡರೆ ಪರಿಸರ ರಕ್ಷಣೆ ಸುಲಭ ಎಂದರು.
ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಶುಭ ಹಾರೈಸಿದರು.
ಪರಿಷತ್ನ ಗೌರವ ಕಾರ್ಯದರ್ಶಿಗಳಾದ ಜನಾರ್ದನ್ ಕೊಡವೂರು, ರಂಜಿನಿ ವಸಂತ್, ಸದಸ್ಯೆ ದೀಪಾ ಕರ್ಕಿ, ಮಣಿಪಾಲ ರೇಡಿಯೋದ ಡಾ.ರಶ್ಮಿ ಅಮ್ಮೆಂಬಳ, ಆಕ್ಸಿಸ್ ಬ್ಯಾಂಕ್ನ ಜ್ಯೋತಿ ಶೇಟ್, ಡಾ. ಶಿವರಾಮ ಕಾರಂತ ಟ್ರಸ್ಟ್ನ ಸದಸ್ಯ ಸತೀಶ್ ಕೊಡವೂರು, ಮೋಲ್ಟೋ ಕ್ಯಾರ್ನ ಕೆ.ಆರ್. ತಂತ್ರಿ ಇತರರು ಉಪಸ್ಥಿತರಿದ್ದರು.
ಉಡುಪಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ರವಿರಾಜ್ ಎಚ್.ಪಿ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಸಾಪ ಉಡುಪಿ ತಾಲೂಕು ಟಕದ ಸಂಘಟನಾ ಕಾರ್ಯದರ್ಶಿ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.