ಉಡುಪಿ: ಜನರಿಗೆ ತಗುಲಿರುವ ರೋಗಗಳನ್ನು ಗುಣಪಡಿಸಲು ಆಸ್ಪತ್ರೆಗಳು ಸಮರ್ಪಿತವಾಗಿವೆ. ಆದರೆ, ಆಸ್ಪತ್ರೆಯಿಂದಲೂ ಸಹ ಪ್ರಕೃತಿಯನ್ನು ರಸುವ ಮೂಲಕ ಆರೋಗ್ಯ ಸೇವೆ ವಿಸ್ತರಿಸಲು ಬಯಸಿದ್ದೇವೆ. ವಿಶ್ವ ಪರಿಸರದ ದಿನದ ನಿಮಿತ್ತ ಮಣಿಪಾಲದ ಕೆಎಂಸಿಯಲ್ಲಿ ಇರುವ ರೋಗಿಗಳಿಗೆ, ಸಹಾಯಕರಿಗೆ ಸಸಿ ವಿತರಿಸಿದ್ದೇವೆ. ಅದು ಭರವಸೆ, ಬೆಳವಣಿಗೆ ಮತ್ತು ಪರಿಸರದ ಬಗ್ಗೆ ಇರುವ ಕಾಳಜಿಯ ದ್ಯೋತಕವಾಗಿದೆ. ಹಸಿರು ಮತ್ತು ಆರೋಗ್ಯಕರ ಭವಿಷ್ಯ ಸೃಷ್ಟಿಸುವ ಆಶಯವಾಗಿದೆ ಎಂದು ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ತಿಳಿಸಿದರು.