ಕಾಞಂಗಾಡಿನಲ್ಲಿ ವಿಶ್ವ ಸ್ತನ್ಯಪಾನ ವಾರಾಚರಣೆ

  ವಿಶ್ವ ಸ್ತನ್ಯಪಾನ ವಾರಾಚರಣೆ ಜಿಲ್ಲಾಮಟ್ಟದ ವಿಚಾರ ಸಂಕಿರಣವನ್ನು ಸಿಡಬ್ಲ್ಯುಸಿ ಅಧ್ಯಕ್ಷೆ ರೇಣುಕಾದೇವಿ ತಂಕಚ್ಚಿ ಉದ್ಘಾಟಿಸಿ ವಾತನಾಡಿದರು. ನಿಶಾಮೋಳ್, ಶ್ರೀಜಾ ವಿ. ಇತರರು ಇದ್ದರು.
ವಿಶ್ವ ಸ್ತನ್ಯಪಾನ ವಾರಾಚರಣೆ ಜಿಲ್ಲಾಮಟ್ಟದ ವಿಚಾರ ಸಂಕಿರಣವನ್ನು ಸಿಡಬ್ಲ್ಯುಸಿ ಅಧ್ಯಕ್ಷೆ ರೇಣುಕಾದೇವಿ ತಂಕಚ್ಚಿ ಉದ್ಘಾಟಿಸಿ ವಾತನಾಡಿದರು. ನಿಶಾಮೋಳ್, ಶ್ರೀಜಾ ವಿ. ಇತರರು ಇದ್ದರು.
Published on

ಕಾಸರಗೋಡು: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಮಟ್ಟದ ಐಸಿಡಿಎಸ್ ಟಕ ಮತ್ತು ಪೋಷಣ್ ಅಭಿಯಾನದ ಸಂಯುಕ್ತಾಶ್ರಯದಲ್ಲಿ ‘ವಿಶ್ವ ಸ್ತನ್ಯಪಾನ ವಾರಾಚರಣೆ’ ಅಂಗವಾಗಿ ಜಿಲ್ಲಾಮಟ್ಟದ ವಿಚಾರ ಸಂಕಿರಣ ಮತ್ತು ಜಾಗೃತಿ ಕಾರ್ಯಕ್ರಮ ಕಾಞಂಗಾಡಿನ ರಾಜ್ ರೆಸಿಡೆನ್ಸಿಯಲ್ಲಿ ಜರುಗಿತು.

ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಣುಕಾದೇವಿ ತಂಕಚ್ಚಿ ಸವಾರಂಭ ಉದ್ಘಾಟಿಸಿದರು. ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ನಿಶಾಮೋಳ್ ವಿ.ಎ. ಅಧ್ಯಕ್ಷತೆ ವಹಿಸಿದ್ದರು. ಕಾರಡ್ಕ ಐಸಿಡಿಎಸ್ ಯೋಜನೆಯ ಸಿಡಿಪಿಒ ಶ್ರೀಜಾ ವಿ. ಉಪಸ್ಥಿತರಿದ್ದರು. ಜಿಲ್ಲಾ ಮಟ್ಟದ ಐಸಿಡಿಎಸ್ ಕೋಶದ ಕಾರ್ಯಕ್ರಮ ಅಧಿಕಾರಿ ಜೆವ್ಲಾ ರಾಣಿ ಎ.ಕೆ. ಸ್ವಾಗತಿಸಿದರು. ಕಾಞಂಗಾಡು ಸಿಡಿಪಿಒ ಸಾಯನಾ ವಂದಿಸಿದರು.

ವಿಚಾರಸಂಕಿರಣದಲ್ಲಿ ಕಾಸರಗೋಡು ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯ ಮಕ್ಕಳತಜ್ಞ ಡಾ.ಬಿಪಿನ್ ಕೆ. ಹಾಗೂ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೇಣುಕಾದೇವಿ ತಂಕಚ್ಚಿ ವಿಷಯ ಮಂಡಿಸಿದರು. ಅಂಗನವಾಡಿ ಕಾರ್ಯಕರ್ತೆಯರಿಂದ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾಞಂಗಾಡಿನ ಹೆಚ್ಚುವರಿ ಐಸಿಡಿಎಸ್ ತಂಡ ಎದೆಹಾಲುಣಿಸುವ ಮಹತ್ವ ಸಾರುವ ಕಿರುನಾಟಕ ಪ್ರದರ್ಶಿಸಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net