ತಾಯಿ ಎದೆ ಹಾಲು ಶಿಶುವಿಗೆ ಅಮೃತ

 ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಯಂದಿರಿಗೆ ಪೌಷ್ಟಿಕ ಆಹಾರ ವಿತರಿಸಲಾಯಿತು. ಪ್ರಮುಖರಾದ ಕುಸುವಾ ಮನೋಜ್, ರಾಜಾರಾಮ ಐತಾಳ, ವ್ನಿೇಶ್ವರ ಅಡಿಗ ಮೊದಲಾದವರಿದ್ದರು.
ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತಾಯಂದಿರಿಗೆ ಪೌಷ್ಟಿಕ ಆಹಾರ ವಿತರಿಸಲಾಯಿತು. ಪ್ರಮುಖರಾದ ಕುಸುವಾ ಮನೋಜ್, ರಾಜಾರಾಮ ಐತಾಳ, ವ್ನಿೇಶ್ವರ ಅಡಿಗ ಮೊದಲಾದವರಿದ್ದರು.
Published on
ಕೋಟ: ನವಜಾತ ಶಿಶುವಿಗೆ ತಾಯಿಯ ಎದೆಹಾಲು ಅಮೃತ ಸವಾನ ಎಂದು ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾವೇಂದ್ರ ರಾವ್ ಹೇಳಿದರು.
ಹಂಗಾರಕಟ್ಟೆ ರೋಟರಿ ಕ್ಲಬ್ ಹಾಗೂ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ಸಾಸ್ತಾನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇತ್ತೀಚೆಗೆ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಹಾಗೂ ವಿಶ್ವ ಜನಸಂಖ್ಯಾ ದಿನಾಚರಣೆಯಲ್ಲಿ ಮಾತನಾಡಿದರು.
ರೋಟರಿ ಅಧ್ಯಕ್ಷೆ ಕುಸುವಾ ಮನೋಜ್ ಸವಾರಂಭ ಉದ್ಘಾಟಿಸಿದರು. ತಾಯಂದಿರಿಗೆ ಪೌಷ್ಟಿಕ ಆಹಾರ ವಿತರಿಸಲಾಯಿತು. ಶಿಶುವಿಗೆ ಹಾಲುಣಿಸುವಾಗ ತಾಯಂದಿರು ವಹಿಸಬೇಕಾದ ಎಚ್ಚರಿಕೆ ಕುರಿತು ಜಾಗೃತಿ ಕರಪತ್ರ ಬಿಡುಗಡೆ ವಾಡಲಾಯಿತು.

ರೋಟರಿ ಸದಸ್ಯರಾದ ವ್ನಿೇಶ್ವರ ಅಡಿಗ, ಅರವಿಂದ ಶರ್ಮ, ಮನೋಜ್ ಕುವಾರ್, ಸುಲತಾ ಎಸ್.ಹೆಗ್ಡೆ, ಜ್ಯೋತಿ ಉದಯ್ ಕುವಾರ್, ಅಮಿತಾ ಉಮೇಶ್ ಮೊದಲಾದವರಿದ್ದರು. ರೋಟರಿ ಕಾರ್ಯದರ್ಶಿ ರಾಜಾರಾಮ ಐತಾಳ ಸ್ವಾಗತಿಸಿದರು. ಆರೋಗ್ಯ ನಿರೀಕ್ಷಣಾಧಿಕಾರಿ ಹರಿಶ್ಚಂದ್ರ ನಿರೂಪಿಸಿದರು. ಸುರಕ್ಷಾಧಿಕಾರಿ ಹೇವಾವತಿ ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net