ಕರ್ನಾಟಕ ಕರಾವಳಿ ಸ್ಥಳೀಯ ಮತ್ತು ಆರ್ಥಿಕತೆ ಬಲಪಡಿಸುವ ಯೋಜನೆ ಅಂಗವಾಗಿ ವಿಶ್ವ ಬ್ಯಾಂಕ್ನ ವಿವಿಧ ದೇಶಗಳ ಅಧಿಕಾರಿಗಳು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಕರಾವಳಿ ಪ್ರದೇಶಗಳ ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು. ಪ್ರಮುಖರಾದ ಪ್ರತಿಕ್ ಬಾಯಲ್, ಶ್ರೀಧರ್, ವಿಜಯ ಕುಮಾರ್ ಮೊದಲಾದವರಿದ್ದರು.
ಕರ್ನಾಟಕ ಕರಾವಳಿ ಸ್ಥಳೀಯ ಮತ್ತು ಆರ್ಥಿಕತೆ ಬಲಪಡಿಸುವ ಯೋಜನೆ (ಕೆ-ಶೋರ್) ಅಂಗವಾಗಿ ವಿಶ್ವ ಬ್ಯಾಂಕ್ನ ವಿವಿಧ ದೇಶಗಳ ಅಧಿಕಾರಿಗಳು ಉಡುಪಿ ಜಿಲ್ಲೆಗೆ ಭೇಟಿ ನೀಡಿ ಕರಾವಳಿ ಪ್ರದೇಶಗಳ ಪರಿಸರ ಸಂರಕ್ಷಣೆ ಹಾಗೂ ತ್ಯಾಜ್ಯ ನಿರ್ವಹಣಾ ಕ್ರಮಗಳ ಕುರಿತು ಪರಿಶೀಲನೆ ನಡೆಸಿದರು.
ವಿವಿಧೆಡೆ ಭೇಟಿ, ಪರಿಶೀಲನೆ
ಅಧಿಕಾರಿಗಳ ತಂಡ ಪಡುಬಿದ್ರಿ ಬ್ಲೂ ಫ್ಲ್ಯಾಗ್ ಬೀಚ್ ಹಾಗೂ ಪಡುಬಿದ್ರಿ ಗ್ರಾಮ ಪಂಚಾಯಿತಿ ಕಸ ನಿರ್ವಹಣಾ ಘಟಕ, ಎಲ್ಲೂರು ಎಂಆರ್ಎಫ್ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಸಿಬ್ಬಂದಿಯೊಂದಿಗೆ ಸಂವಾದ
ತ್ಯಾಜ್ಯ ನಿರ್ವಹಣೆಯಲ್ಲಿ ತೊಡಗಿರುವ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿ, ಕೈಗೊಳ್ಳಲಾಗುತ್ತಿರುವ ಕ್ರಮಗಳ ಕುರಿತು ಮಾಹಿತಿ ಪಡೆದುಕೊಂಡರು.
ಅಧಿಕಾರಿಗಳ ಉಪಸ್ಥಿತಿ
ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್, ಅರಣ್ಯ ಇಲಾಖೆ ಎಸಿಎಫ್ ಶ್ರೀಧರ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ವಿಜಯ ಕುಮಾರ್, ಪಡುಬಿದ್ರಿ ಪಿಡಿಒ ಮಂಜುನಾಥ್ ಶೆಟ್ಟಿ ಉಪಸ್ಥಿತರಿದ್ದರು.