ಭಗವದ್ಗೀತೆಯಲ್ಲಿದೆ ತತ್ತ್ವ, ಜೀವನದ ವಿಜ್ಞಾನ

ಉಡುಪಿಯ ಡಾ. ಜಿ.ಶಂಕರ್​ ಕಾಲೇಜ್​ನಲ್ಲಿ 'ಶಿಕ್ಷಕರ ಕಾರ್ಯಕ್ಷಮತೆಗಾಗಿ ಭಾರತೀಯ ಜ್ಞಾನ ವ್ಯವಸ್ಧೆ' ಕಾರ್ಯಾಗಾರ ನಡೆಯಿತು. ಪ್ರೊ. ಸುಧೀರ್​ ರಾಜ್​ ಕೆ., ಡಾ. ಬಿ.ಗೋಪಾಲ್​ ಆಚಾರ್ಯ, ಡಾ. ನಿಕೇತನಾ, ಪ್ರೊ. ಶ್ರೀಮತಿ ಅಡಿಗ, ಕೃಷ್ಣರಾಜ್​ ಭಟ್​, ಶರತ್​ ಕುಮಾರ್​, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿದ್ದರು.
ಉಡುಪಿಯ ಡಾ. ಜಿ.ಶಂಕರ್​ ಕಾಲೇಜ್​ನಲ್ಲಿ 'ಶಿಕ್ಷಕರ ಕಾರ್ಯಕ್ಷಮತೆಗಾಗಿ ಭಾರತೀಯ ಜ್ಞಾನ ವ್ಯವಸ್ಧೆ' ಕಾರ್ಯಾಗಾರ ನಡೆಯಿತು. ಪ್ರೊ. ಸುಧೀರ್​ ರಾಜ್​ ಕೆ., ಡಾ. ಬಿ.ಗೋಪಾಲ್​ ಆಚಾರ್ಯ, ಡಾ. ನಿಕೇತನಾ, ಪ್ರೊ. ಶ್ರೀಮತಿ ಅಡಿಗ, ಕೃಷ್ಣರಾಜ್​ ಭಟ್​, ಶರತ್​ ಕುಮಾರ್​, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿದ್ದರು.
Published on

* ಪ್ರೊ. ಸುಧೀರ್​ ರಾಜ್​ ಕೆ. ಅಭಿಪ್ರಾಯ

* 'ಭಾರತೀಯ ಜ್ಞಾನ ವ್ಯವಸ್ಧೆ' ಬೋಧಕ ಕಾರ್ಯಾಗಾರ

ಉಡುಪಿ: ಭಗವದ್ಗೀತೆಯ ಮೂಲಕ ಶ್ರೀಕೃಷ್ಣನು ಸೋಲಿನ ಮನೋಭಾವದಲ್ಲಿದ್ದ ಅರ್ಜುನನನ್ನು ವಿಜಯದತ್ತ ಕೊಂಡೊಯ್ದು ಆತನಲ್ಲಿದ್ದ ಸಾಮರ್ಥ್ಯ ಅರಿತುಕೊಳ್ಳುವಂತೆ ಮಾಡಿದನು. ಭಗವದ್ಗೀತೆಯು ತತ್ತ್ವಶಾಸ್ತ್ರವಷ್ಟೇ ಅಲ್ಲ. ಜೀವನದ ವಿಜ್ಞಾನವೂ ಹೌದು. ಮನಸ್ಸಿನ ನಿರ್ವಹಣೆ ಹಾಗೂ ಸಕಾರಾತ್ಮಕ ಮನೋವಿಜ್ಞಾನದ ದೃಷ್ಟಿಯಿಂದಲೂ ಅದರಲ್ಲಿ ಮಹತ್ವದ ಪಾಠಗಳಿವೆ. ವಿದ್ಯಾರ್ಥಿಗಳೊಂದಿಗೆ ವ್ಯವಹರಿಸುವಾಗ ಶಿಕ್ಷಕರು ಅವರಲ್ಲಿರುವ ಸಾಮರ್ಥ್ಯ ಗುರುತಿಸಿ, ಅದನ್ನು ಹೊರತರುವ ಪ್ರಯತ್ನ ಮಾಡಬೇಕು ಎಂದು ನಿಟ್ಟೆ ಡೀಮ್ಡ್​ ವಿಶ್ವವಿದ್ಯಾಲಯದ ಭಾರತೀಯ ಜ್ಞಾನ ವ್ಯವಸ್ಥೆ ಕೇಂದ್ರದ ನಿರ್ದೇಶಕ ಪ್ರೊ. ಸುಧೀರ್​ ರಾಜ್​ ಕೆ. ಕರೆ ನೀಡಿದರು.
ಉಡುಪಿಯ ಅಜ್ಜರಕಾಡಿನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜ್​ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ಐಕ್ಯೂಎಸಿ ವತಿಯಿಂದ ಆಯೋಜಿಸಿದ್ದ 'ಶಿಕ್ಷಕರ ಕಾರ್ಯಕ್ಷಮತೆಗಾಗಿ ಭಾರತೀಯ ಜ್ಞಾನ ವ್ಯವಸ್ಧೆ' ಎಂಬ ಬೋಧಕ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹಸ್ತಪ್ರತಿಗಳ ಸಂರಕ್ಷಣೆ ಅಗತ್ಯ
ಶ್ರೀ ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ಡಾ. ಬಿ.ಗೋಪಾಲ್​ ಆಚಾರ್ಯ ಮಾತನಾಡಿ, ಭಾರತೀಯ ಜ್ಞಾನ ಪರಂಪರೆಯ ಮೇಲೆ ಬಾಹ್ಯ ಶಕ್ತಿಗಳ ಪ್ರಭಾವ, ದಾಳಿಯಿಂದ ಹಾನಿಯಾಗಿದೆ. ಹೀಗಾಗಿ ಭಾರತದಲ್ಲಿ ಈಗಿರುವ ಪ್ರಾಚೀನ ಹಸ್ತಪ್ರತಿಗಳ ಸಂರಕ್ಷಣೆ ಇಂದಿನ ತುರ್ತು ಅಗತ್ಯವಾಗಿದೆ. ಹಸ್ತಪ್ರತಿಗಳ ಸಮೀಕ್ಷೆ, ದಾಖಲಾತಿ, ಸಂರಕ್ಷಣೆ ಹಾಗೂ ಡಿಜಿಟಲೀಕರಣಕ್ಕಾಗಿ ಕೇಂದ್ರ ಸಂಸ್ಕೃತಿ ಸಚಿವಾಲಯದ 'ಜ್ಞಾನ ಭಾರತಂ ಅಭಿಯಾನ'ವು ಮಹತ್ವದ ಕಾರ್ಯ ಮಾಡುತ್ತಿದೆ. ಹಸ್ತಪ್ರತಿಗಳು ಭಾರತದ ಜ್ಞಾನ ಪರಂಪರೆಯ ಪ್ರಮುಖ ಆಕರಗಳಾಗಿದ್ದು ಅವುಗಳನ್ನು ಮುಂದಿನ ಪೀಳಿಗೆಗಾಗಿ ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.
ಕಾಲೇಜ್​ನ ಪ್ರಾಂಶುಪಾಲೆ ಪ್ರೊ. ನಿಕೇತನಾ ಅಧ್ಯಕ್ಷತೆ ವಹಿಸಿದ್ದರು.
ಐಕ್ಯೂಎಸಿ ಸಂಯೋಜಕಿ ಪ್ರೊ. ಶ್ರೀಮತಿ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಕೃಷ್ಣರಾಜ್​ ಭಟ್​ ಪರಿಚಯಿಸಿದರು. ಸಹಾಯಕ ಪ್ರಾಧ್ಯಾಪಕ ಶರತ್​ ಕುಮಾರ್​ ವಂದಿಸಿದರು.
"

ಭಾರತೀಯ ಜ್ಞಾನ ವ್ಯವಸ್ಥೆ ಯಾವುದೇ ಭೌಗೋಳಿಕ ಗುರುತಿಗೆ ಸೀಮಿತವಾಗಿಲ್ಲ. ಮನೋವಿಜ್ಞಾನ, ಗಣಿತ, ವಿಜ್ಞಾನ, ಆಡಳಿತ ವ್ಯವಸ್ಥೆ ಹಾಗೂ ಮೌಲ್ಯಗಳನ್ನು ಸಮನ್ವಯಗೊಳಿಸಿಕೊಂಡ ಸಮಗ್ರ ಜ್ಞಾನ ಪರಂಪರೆಯಾಗಿದೆ. ವಿದ್ಯಾರ್ಥಿಗಳಲ್ಲಿ ಪ್ರಶ್ನಿಸುವ, ತಾರ್ಕಿಕವಾಗಿ ಚಿಂತಿಸುವ ಹಾಗೂ ವಿಚಾರಗಳ ವಿಶ್ಲೇಷಿಸುವ ಮನೋಭಾವ ಬೆಳೆಸಬೇಕು. ತನ್ಮೂಲಕ ಅವರನ್ನು ಸ್ವತಂತ್ರ ಮತ್ತು ವಿಮರ್ಶಾತ್ಮಕ ಚಿಂತಕರನ್ನಾಗಿ ರೂಪಿಸುವುದು ಶಿಕ್ಷಕರ ಪ್ರಮುಖ ಹೊಣೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net