

ಕಾಸರಗೋಡು: ರಾಷ್ಟ್ರೀಯ ಹೆದ್ದಾರಿಯಲ್ಲಿನ ಬೀದಿ ದೀಪ ದುರಸ್ತಿ ಕಾರ್ಯದ ವೇಳೆ ಹೈಡ್ರಾಲಿಕ್ ಲಿಫ್ಟ್‌ನಲ್ಲಿ ಕಾಣಿಸಿಕೊಂಡ ದೋಷದಿಂದಾಗಿ ಇಬ್ಬರು ಕಾರ್ಮಿಕರು ತಾಸುಗಳ ಕಾಲ ಲಿಫ್ಟ್‌ನಲ್ಲಿ ಮೇಲ್ಮಟ್ಟದಲ್ಲಿ ಸಿಲುಕಿಕೊಂಡರು. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಸುಮಾರು 13 ಮೀಟರ್ ಎತ್ತರದಲ್ಲಿ ಸಿಲುಕಿಕೊಂಡಿದ್ದ ಕಾರ್ಮಿಕರನ್ನು ರಕ್ಷಿಸಿದರು.
ಲಿಫ್ಟ್ ದೋಷದಿಂದ ಸಿಲುಕಿಕೊಂಡ ಕಾರ್ಮಿಕರಾದ ಅಶೋಕ್(50) ಮತ್ತು ಶಿವಪ್ರಸಾದ್(40) ಅವರನ್ನು ಸುರಕ್ಷಿತವಾಗಿ ಕೆಳಗಿಳಿಸಲಾಯಿತು. ರಾಷ್ಟ್ರೀಯ ಹೆದ್ದಾರಿ ಬೀದಿ ದೀಪ ದುರಸ್ತಿ ವೇಳೆ ತಿಂಗಳುಗಳ ಹಿಂದೆ ಲಿಫ್ಟ್ ತುಂಡಾಗಿ ಬಿದ್ದು ಒಬ್ಬರು ಮೃತಪಟ್ಟಿದ್ದ ಘಟನೆ ನಡೆದಿತ್ತು.