ಮರದ ಗೆಲ್ಲು ಬಿದ್ದು ಕಾರ್ಮಿಕ ಸಾವು

ಕುದ್ಮಾರು ಗ್ರಾಮದಲ್ಲಿ ಮರ ಕಡಿಯುವ ವೇಳೆ
ಕುದ್ಮಾರು ಗ್ರಾಮದಲ್ಲಿ ಮರ ಕಡಿಯುವ ವೇಳೆ
Published on
ಕಡಬ: ತಾಲೂಕಿನ ಕುದ್ಮಾರು ಗ್ರಾಮದಲ್ಲಿ ಮರ ಕಡಿಯುವ ವೇಳೆ ಗೆಲ್ಲು ಬಿದ್ದು ಕೂಲಿಕಾರ್ಮಿಕ ಕಾಯ್ಮಣ ಗ್ರಾಮದ ಅಗಳಿ ನಿವಾಸಿ ಮೋಹನ ಎ.ಕೆ.(55) ಎಂಬುವರು ಮೃತಪಟ್ಟಿದ್ದಾರೆ.
ಕುದ್ಮಾರು ಗ್ರಾಮದ ಎರ್ಮೆತ್ತಿಮಾರ್ ಬಳಿ ನಿತಿನ್ ಎಂಬುವರ ಮನೆಯ ಬಳಿ ಮೋಹನ ಎ.ಕೆ. ಹಾಗೂ ಸಹ ಕೆಲಸಗಾರ ದೇವಣ್ಣ ಮರ ಕಡಿಯುತ್ತಿದ್ದರು. ಮರವನ್ನು ಬುಡದಿಂದ ಕಡಿದು ಕೆಳಗೆ ಬೀಳಿಸುವ ವೇಳೆ, ಮರಕ್ಕೆ ಕಟ್ಟಿದ್ದ ನೈಲಾನ್ ಹಗ್ಗ ಎಳೆಯುತ್ತಿದ್ದ ಮೋಹನ ಅವರ ಮೇಲೆ ಮರದ ಕೊಂಬೆಯೊಂದು ಬಿದ್ದಿದೆ.
ಗಂಭೀರ ಗಾಯಗೊಂಡ ಅವರನ್ನು ತಕ್ಷಣ ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net