ಕೆರೆಯಲ್ಲಿ ಮುಳುಗಿ ಕಾರ್ಮಿಕ ಸಾವು

drown
drown
Published on

ಕಾಸರಗೋಡು: ಮೊಗ್ರಾಲ್‌ಪುತ್ತೂರಿನಲ್ಲಿ ಸ್ನೇಹಿತರ ಜತೆಗೆ ಕೆರೆಗೆ ಸ್ನಾನಕ್ಕಿಳಿದ ವಲಸೆ ಕಾರ್ಮಿಕ, ರಾಜಸ್ಥಾನ ಜೈಪುರ ಈದ್ರ ದಿಲ್ಲಿ ರಸ್ತೆ ಬಳಿಯ ಅಲ್ ಫೈದ್ ಫರ್ದೀನ್ ಖಾನ್ (23) ನೀರಲ್ಲಿ ಮುಳುಗಿ ಮೃತಪಟ್ಟಿದ್ದಾರೆ.

ಮೊಗ್ರಾಲ್ ಪುತ್ತೂರಿನ ಉಜಿರೆಕೆರೆ ಬಳಿಯ ಫ್ಲಾೃಟ್ ಒಂದರಲ್ಲಿ ಇತರ ವಲಸೆ ಕಾರ್ಮಿಕರೊಂದಿಗೆ ವಾಸಿಸುತ್ತಿದ್ದ ಫರ್ದೀನ್ ಖಾನ್ ಶುಕ್ರವಾರ ಸ್ನೇಹಿತರ ಜತೆ ಸಮೀಪದ ಕೆರೆಗೆ ಸ್ನಾನ ಮಾಡಲು ತೆರಳಿದ್ದರು.
ಈಜು ಬಾರದೆ ನೀರಲ್ಲಿ ಮುಳುಗಿದ್ದಾರೆ. ತಕ್ಷಣ ಕಾಸರಗೋಡು ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ ಅಲ್ ಫೈದ್ ಫರ್ದೀನ್ ಖಾನ್ ಅವರನ್ನು ಕೆರೆಯಿಂದ ಮೇಲೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ. ಕಾಸರಗೋಡು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net