ಒಡಿಶಾದ ಅಟೀಸ್ ಸಾಹು ಅಲಿಯಾಸ್ ಜಗ(42) ಮೃತ. ಈತ ಹಾಗೂ ಕೈಲಾಸ್ ಎಂಬಾತ ಪಡುಪಣಂಬೂರು ಟಿಎ ಬೋರ್ಡ್‌ನಲ್ಲಿ ಗುತ್ತಿಗೆ ಕಾರ್ಮಿಕರಾಗಿದ್ದು, ಸೋಮವಾರ ಸಂಜೆ ಕೆಲಸ ಮುಗಿಸಿ ತೆರಳುವಾಗ ಇಂದಿರಾ ನಗರ ರೈಲ್ವೆ ಗೇಟ್ ಹಾಕಿರುವುದನ್ನು ನೋಡಿ ಸ್ಥಳೀಯರ ಎಚ್ಚರಿಕೆಯನ್ನು ಲೆಕ್ಕಿಸದೆ ಹಳಿ ದಾಟಲು ಯತ್ನಿಸಿದಾಗ ಉಡುಪಿ ಕಡೆಗೆ ಹೋಗುತ್ತಿದ್ದ ರೈಲು ಡಿಕ್ಕಿ ಹೊಡೆದಿದೆ. ಮೂಲ್ಕಿ ಪೊಲೀಸರು ಸ್ಥಳೀಯರ ನೆರವಿನಿಂದ ಮೃತದೇಹ ತೆರವುಗೊಳಿಸಿದರು.