ಮರದ ಬಾಕ್ಸ್ ಒಡೆದು 84,800ರೂ. ಕಳವು

Theft
Theft
Published on

ಕಡಬ: ಮನೆಯ ಕೊಠಡಿಯಲ್ಲಿದ್ದ ಮರದ ಬಾಕ್ಸ್ ಒಡೆದು 84,800 ರೂ. ನಗದು ಕಳವು ವಾಡಿರುವ ಟನೆ ಕಡಬ ಗ್ರಾಮದ ಅಡ್ಡಗದ್ದೆಯಲ್ಲಿ ನಡೆದಿದೆ. ಅಡ್ಡಗದ್ದೆ ನಿವಾಸಿ ತಮನ್ನಾ ಜಬೀನ್ (43) ಕಡಬ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಆ.18ರಂದು ಕಾರ್ಯಕ್ರಮದ ನಿಮಿತ್ತ ಪತಿ ಹಾಗೂ ಮಕ್ಕಳೊಂದಿಗೆ ಉಡುಪಿಗೆ ತೆರಳಿ ಅದೇ ದಿನ ಮನೆಗೆ ವಾಪಸಾಗಿದ್ದರು. 24ರಂದು ಬಾಕ್ಸ್‌ನಲ್ಲಿದ್ದ ಹಣವನ್ನು ತೆಗೆಯಲು ಹೋದಾಗ, ಬಾಕ್ಸ್ ಒಡೆದ ಸ್ಥಿತಿಯಲ್ಲಿ ಕಂಡುಬಂದಿದೆ.

ಪರಿಶೀಲಿಸಿದಾಗ ಅದರಲ್ಲಿದ್ದ 84,800 ರೂ. ನಗದು ಕಾಣೆಯಾಗಿರುವುದು ಬೆಳಕಿಗೆ ಬಂದಿದೆ. ದೂರಿನ ಮೇರೆಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net