ಹೆತ್ತಮ್ಮನಿಗೆ ನೀಡಿ ಗೌರವ

ಉಡುಪಿಯ ಕಡಿಯಾಳಿಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಮಹಿಳಾ ದಿನ ಆಚರಿಸಲಾಯಿತು. ಶ್ರೀನಿವಾಸ್​ ರಾವ್​ ಕೆ., ಪ್ರಭಾವತಿ ಎಸ್​. ಅಡಿಗ, ಪೂರ್ಣಿಮಾ ಎಸ್​. ರಾವ್​, ಸುನೀತಾ ಶೇಟ್​, ಜ್ಯೋತಿ, ದೀಪಾ ಇದ್ದರು.
ಉಡುಪಿಯ ಕಡಿಯಾಳಿಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಮಹಿಳಾ ದಿನ ಆಚರಿಸಲಾಯಿತು. ಶ್ರೀನಿವಾಸ್​ ರಾವ್​ ಕೆ., ಪ್ರಭಾವತಿ ಎಸ್​. ಅಡಿಗ, ಪೂರ್ಣಿಮಾ ಎಸ್​. ರಾವ್​, ಸುನೀತಾ ಶೇಟ್​, ಜ್ಯೋತಿ, ದೀಪಾ ಇದ್ದರು.
Published on

* ಶ್ರೀನಿವಾಸ್​ ರಾವ್​ ಕೆ. ಕಿವಿಮಾತು

* ವಿಶ್ವ ಮಹಿಳಾ ದಿನಾಚರಣೆ

ಉಡುಪಿ: ಸಮಾಜದಲ್ಲಿ ಪ್ರತಿದಿನವೂ ಮಹಿಳೆಗೆ ಗೌರವ ಲಭಿಸಬೇಕು. ಹೆತ್ತಮ್ಮನಿಗೆ ಮೊದಲು ಎಲ್ಲರೂ ಗೌರವ ನೀಡಬೇಕು. ರಾಷ್ಟ್ರಕವಿ ಕುವೆಂಪು ಆಶಯದಂತೆ ಬೆಂಕಿಯಲ್ಲಿ ಸುಟ್ಟುಕೊಳ್ಳುವಂತಹ, ಮಳೆಗೆ ನೆನೆಯುವಂತಹ, ಬಿರುಗಾಳಿಗೆ ಮೈ ಒಡ್ಡುವ ಆಕೆಯ ಪ್ರತಿ ಶ್ರಮಕ್ಕೂ ಗೌರವ ಕೊಡಬೇಕು ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್​ ರಾವ್​ ಕೆ. ಹೇಳಿದರು.
ಉಡುಪಿಯ ಕಡಿಯಾಳಿಯ ಶಾಲೆಯಲ್ಲಿ ಸಮಾನ ಮನಸ್ಕ ಕನ್ನಡಿಗರ ವೇದಿಕೆಯಿಂದ ಭಾನುವಾರ (ಮಾ.8) ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ಕ್ಷೇತ್ರಗಳಲ್ಲೂ ಸಾಧನೆ

ಕಡಿಯಾಳಿ ಶಾಲೆಯ ಆಡಳಿತಗಾರರಾದ ಪ್ರಭಾವತಿ ಎನ್​. ಅಡಿಗ ಮಾತನಾಡಿ, ಪ್ರತಿ ಕ್ಷೇತ್ರದಲ್ಲೂ ಮಹಿಳೆ ಸಾಧನೆ ಮಾಡುತ್ತಿದ್ದಾಳೆ. ಅಗ್ನಿಶಾಮಕ ದಳದಲ್ಲಿಯೂ ಸೇವೆ ಸಲ್ಲಿಸುತ್ತಿದ್ದಾಳೆ. ಇತಿಹಾಸ ನೋಡಿದಾಗ ಮಹಿಳೆ ಎದುರಿಸಿರುವ ಸಮಸ್ಯೆ ತಿಳಿದುಬರುತ್ತದೆ. ಇತ್ತೀಚೆಗೆ ಸಮಾಜದಲ್ಲಿ ಹಾಗೂ ಮನೆಯೊಳಗಿನ ವಾತಾವರಣ ಬದಲಾಗುತ್ತಿದೆ. ಆದರೆ, ಹೆಣ್ಣು ಜನಿಸಿದರೆ ಹೀನವಾಗಿ ವರ್ತಿಸುವ ಪರಿಸ್ಥಿತಿ ಇಂದಿಗೂ ದೇಶದ ವಿವಿಧೆಡೆ ಇದೆ. ಶಿಕ್ಷಣದಿಂದ ಮಾತ್ರ ಮಹಿಳೆ ಎಲ್ಲ ರೀತಿಯ ಸಮಸ್ಯೆ ಎದುರಿಸಲು ಸಾಧ್ಯ ಎಂದರು.
ಶಿಕ್ಷಕಿ ಸುನೀತಾ ಶೇಟ್​ ಮಾತನಾಡಿ, ಮಹಿಳಾ ದಿನಾಚರಣೆಯೊಂದಿಗೆ ಸಾಕ್ಷರತಾ ದಿನವನ್ನೂ ಆಚರಿಸಲಾಗುತ್ತದೆ. ಸಾಕ್ಷರತಾ ಪ್ರಮಾಣ ಶೇ.72 ಇದ್ದು, ಸಂಸ್ಕಾರಯುತ ಸಾಕ್ಷರರ ಅಗತ್ಯತೆಯಿದೆ. ಅದರಿಂದ ದೇಶದ ಅಭಿವೃದ್ಧಿ ಸಾಧ್ಯ ಎಂದರು.
ಶಿಕ್ಷಕಿ ಪೂರ್ಣಿಮಾ ಎಸ್​. ರಾವ್​ ಮಾತನಾಡಿದರು. ಸುರೇಶ್​ ಡಿ., ಅನುರಾಧಾ ಜಿ.ಎಸ್​., ಜ್ಯೋತಿ ಪ್ರಭು, ದೀಪಾ, ರೂಪಾ, ಕನಿಷ್ಕಾ, ಚಂದ್ರಕಲಾ, ಪೂರ್ಣಿಮಾ, ರಾಘವ ಆಚಾರ್​, ಸುನೀತಾ, ಸಂಗೀತಾ, ವಿಜಯಾ, ಲಕ್ಷ್ಮೀ, ವಿಜಯಲಕ್ಷ್ಮೀ, ಶ್ರೀದೇವಿ, ಚಂದ್ರಶೇಖರ್​ ಉಪಸ್ಥಿತರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net