ಯಕ್ಷಗಾನ ಮಹಿಳಾ ಕಲಾವಿದರ ಸಮಾವೇಶವನ್ನು ಶಕುಂತಳಾ ರಮಾನಂದ ಭಟ್ ಉದ್ಘಾಟಿಸಿದರು. ವಿಶ್ರಾಂತ ಪ್ರಾಧ್ಯಾಪಕಿ ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ, ನಿರ್ಮಲಾ ಹೆಗಡೆ ಶಿರಸಿ, ಜಯಲಕ್ಷ್ಮೀ ಆರ್.ಹೊಳ್ಳ ಕಯ್ಯರು ಉಪಸ್ಥಿತರಿದ್ದರು.
Published on:
Copied
Follow Us
ಕಾಸರಗೋಡು: ಯಕ್ಷಗಾನ ಮಹಿಳಾ ಕಲಾವಿದರಿಗೆ ಪ್ರೋತ್ಸಾಹ ಅಗತ್ಯವಿದ್ದು, ಸಿರಿಬಾಗಿಲು ಪ್ರತಿಷ್ಠಾನ ಹಮ್ಮಿಕೊಳ್ಳುತ್ತಿರುವ ಇಂತಹ ಗೋಷ್ಠಿ ಕಲಾವಿದರಿಗೆ ಸ್ಫೂರ್ತಿ ನೀಡುತ್ತದೆ ಎಂದು ಸುರತ್ಕಲ್ ಇಡ್ಯಾ ದೇವಸ್ಥಾನದ ಶಕುಂತಳಾ ರಮಾನಂದ ಭಟ್ ಹೇಳಿದರು.
ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನದಲ್ಲಿ, ‘ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ’ ಶೀರ್ಷಿಕೆಯ ಸರಣಿ ಕಾರ್ಯಕ್ರಮದನ್ವಯ ಯಕ್ಷಗಾನ ಮಹಿಳಾ ಕಲಾವಿದರ ಸಮಾವೇಶ, ವಿಶೇಷ ‘ಚಿಂತನ- ಮಂಥನ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾಸರಗೋಡಿನ ಹಿರಿಯ ಕಲಾವಿದೆ, ವಿಶ್ರಾಂತ ಪ್ರಾಧ್ಯಾಪಕಿ ಜಯಲಕ್ಷ್ಮೀ ಕಾರಂತ ಮಂಗಲ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ನಿಕಟಪೂರ್ವ ಸದಸ್ಯೆ ನಿರ್ಮಲಾ ಹೆಗಡೆ ಶಿರಸಿ, ಜಯಲಕ್ಷ್ಮೀ ಆರ್.ಹೊಳ್ಳ ಕಯ್ಯರು ಉಪಸ್ಥಿತರಿದ್ದರು.
ಜಯಂತಿ ಎಸ್.ಹೊಳ್ಳ ಕೃಷ್ಣಾಪುರ, ಲಲಿತಾ ಭಟ್ ಕುಳಾಯಿ, ನಿರ್ಮಲಾ ಹೆಗಡೆ ಶಿರಸಿ, ಪದ್ಮಾ ಆಚಾರ್ ಪುತ್ತೂರು, ವೃಂದಾ ಕೊನ್ನಾರ್ ವಿಷಯ ಮಂಡಿಸಿದರು. ಡಾ.ಆರತಿ ಪಟ್ರಮೆ ಸಂವಾದದ ಸಮಗ್ರ ಅವಲೋಕನ ನಡೆಸಿದರು.
ಉಪನ್ಯಾಸಕಿ ಸಾಯಿಸುಮಾ ನಾವಡ ಕಾರ್ಯಕ್ರಮ ನಿರೂಪಿಸಿದರು. ಯಕ್ಷಗಾನದ ಹಿರಿಯ ಮಹಿಳಾ ಕಲಾವಿದೆ ಪೂರ್ಣಿಮಾ ಯತೀಶ್ ರೈ ಸುರತ್ಕಲ್ ಹಾಗೂ ಕೃತಿ ಪುರಪ್ಪೆಮನೆ ಸಾಗರ ಭಾಗವಹಿಸಿದ್ದರು. ನೂರಕ್ಕೂ ಹೆಚ್ಚಿನ ಮಹಿಳಾ ಕಲಾವಿದರು ಸಂವಾದದಲ್ಲಿ ಪಾಲ್ಗೊಂಡರು. ಯವ ಭಾಗವತೆ ಹೇಮಸ್ವಾತಿ ಕುರಿಯಾಜೆ ಪ್ರಾರ್ಥಿಸಿದರು. ಸುಮಿತ್ರಾ ಆರ್.ಮಯ್ಯ ಸ್ವಾಗತಿಸಿದರು.