ಸೋಣ ಸಂಭ್ರಮ, ಸಾಧಕರಿಗೆ ಗೌರವ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಪರಿಸರ ಮತ್ತು ಪ್ರವಾಸೋದ್ಯಮ ನಿಗಮ ಅಧ್ಯಕ್ಷೆ ಶಾಲೆಟ್ ಪಿಂಟೊ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ಸಂಘ ಅಧ್ಯಕ್ಷೆ ಶಮೀನಾ ಆಳ್ವ, ತುಳುನಾಡ ಬಂಟ ಮಹಿಳಾ ಸಂಘ ಉಪಾಧ್ಯಕ್ಷೆ ರೋಹಿಣಿ ಶೆಟ್ಟಿ ಮೊದಲಾದವರಿದ್ದರು.
Published on:
Copied
Follow Us
ಮೂಲ್ಕಿ: ಮಹಿಳೆಯರು ಸ್ವಾವಲಂಬಿಗಳಾಗಿ ಉದ್ಯಮಶೀಲತೆಯನ್ನು ಮೈಗೂಡಿಸಿಕೊಳ್ಳುವ ಜತೆಗೆ ಸಂಸ್ಕಾರವಂತರಾಗಿ ಕುಟುಂಬದ, ಸಮಾಜದ ಆಸ್ತಿಯಾಗಬೇಕು ಎಂದು ಕರ್ನಾಟಕ ರಾಜ್ಯದ ಪರಿಸರ ಮತ್ತು ಪ್ರವಾಸೋದ್ಯಮ ನಿಗಮ ಅಧ್ಯಕ್ಷೆ ಶಾಲೆಟ್ ಪಿಂಟೊ ಹೇಳಿದರು.
ಕೆಂಚನಕೆರೆ ಅಂಬಾ ನಿವಾಸದಲ್ಲಿ ತುಳುನಾಡ ಬಂಟ ಮಹಿಳಾ ಸಂಘದ ವತಿಯಿಂದ ಸೋಣ ಸಂಭ್ರಮ, ಸಾಧಕರಿಗೆ ಗೌರವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಮಹಿಳಾ ಸಂಘ ಅಧ್ಯಕ್ಷೆ ಶಮೀನಾ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಸಾಧಕರ ನೆಲೆಯಲ್ಲಿ ಕರ್ನಾಟಕ ರಾಜ್ಯದ ಪರಿಸರ ಮತ್ತು ಪ್ರವಾಸೋದ್ಯಮ ನಿಗಮ ಅಧ್ಯಕ್ಷೆ ಶಾಲೆಟ್ ಪಿಂಟೊ, ಹರಿಯಾಣದಲ್ಲಿ ನಡೆಲಿರುವ ಎನ್‌ಎಸ್‌ಎಸ್ ಕ್ಯಾಂಪ್‌ನಲ್ಲಿ ಭಾಗವಹಿಸಲು ಆಯ್ಕೆಯಾದ ವಿದ್ಯಾರ್ಥಿನಿ ದೀಪ್ತಿ ಜೆ.ಶೆಟ್ಟಿ, ಶೈಕ್ಷಣಿಕ ಸಾಧಕಿ ಹರ್ಷ ಜೆ.ಶೆಟ್ಟಿ ಅವರನ್ನು ಗೌರವಿಸಲಾಯಿತು.
ತುಳುನಾಡ ಬಂಟ ಮಹಿಳಾ ಸಂಘ ಉಪಾಧ್ಯಕ್ಷೆ ರೋಹಿಣಿ ಶೆಟ್ಟಿ, ಕಾರ್ಯದರ್ಶಿ ಕುಸುಮಾ ರವೀಂದ್ರ ಶೆಟ್ಟಿ, ಕೋಶಾಧಿಕಾರಿ ಜ್ಯೋತಿ ಅಶೋಕ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಶಮೀನಾ ಆಳ್ವ ಸ್ವಾಗತಿಸಿದರು. ರೋಹಿಣಿ ಶೆಟ್ಟಿ ವಂದಿಸಿದರು. ಕುಸುಮ ಶೆಟ್ಟಿ ನಿರೂಪಿಸಿದರು.