ಮಹಿಳೆ ಮೃತದೇಹ ಕೆರೆಯಲ್ಲಿ ಪತ್ತೆ

ಎಂ. ಸುನಿತಾ
ಎಂ. ಸುನಿತಾ
Published on
ಕಾಸರಗೋಡು: ಸೀತಾಂಗೋಳಿ ಎಡನಾಡು ಸಹಕಾರಿ ಬ್ಯಾಂಕ್ ಸಮೀಪದ ನಿವಾಸಿ ರಾಮಕೃಷ್ಣ ಎಂಬುವರ ಪತ್ನಿ ಎಂ.ಸುನೀತಾ(48) ಅವರ ಮೃತದೇಹ ಕುಂಬಳೆ ಸಮೀಪದ ಮುಜಂಗಾವಿನ ಕೆರೆಯಲ್ಲಿ ಪತ್ತೆಯಾಗಿದೆ.
ಬುಧವಾರ ರಾತ್ರಿ ಊಟ ಮುಗಿಸಿ ಮಲಗಲು ತೆರಳಿದ್ದ ಸುನೀತಾ ಗುರುವಾರ ಬೆಳಗ್ಗೆ ನೋಡುವಾಗ ನಾಪತ್ತೆಯಾಗಿದ್ದರು. ಮನೆಯವರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಕುಂಬಳೆ ಠಾಣೆ ಪೊಲೀಸರಿಗೆ ದೂರು ನೀಡಿದ್ದರು. ಇದೀಗ ಮುಜಂಗಾವು ದೇವಾಲಯ ಸಮೀಪದ ಕೆರೆಯಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ.
ಕುಂಬಳೆ ಪೊಲೀಸ್ ಠಾಣೆ ಉಪನಿರೀಕ್ಷಕ ಕೆ.ಪಿ.ಗಣೇಶನ್ ನೇತೃತ್ವದ ಪೊಲೀಸರ ತಂಡ, ಕಾಸರಗೋಡು ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ ನೆರವಿನಿಂದ ಮೃತದೇಹ ಮೇಲಕ್ಕೆತ್ತಿ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಶವಮಹಜರು ನಡೆಸಲಾಯಿತು. ಕುಂಬಳೆ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net