

ಕಾಸರಗೋಡು: ಮಂಜೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆ ಅಡುಗೆ ಕೊಠಡಿಯಲ್ಲಿ ಮಹಿಳೆಯೊಬ್ಬರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಾಶಿಮಠ ಗುಡ್ಡೆಯ ಡಿ.ಯೋಗೀಶ್ ಪ್ರಭು ಅವರ ಪತ್ನಿ ಸಾವಿತ್ರಿ ಪ್ರಭು (65) ಮೃತರು. ಮಂಗಳವಾರ ರಾತ್ರಿ ಎಂದಿನಂತೆ ಊಟ ಮಾಡಿ ಮಲಗಿದ್ದರು.
ಬುಧವಾರ ಎದ್ದು ನೋಡಿದಾಗ ಅಡುಗೆ ಮನೆಯಲ್ಲಿ ಸಾವಿತ್ರಿ ಮೃತದೇಹ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಅಡುಗೆ ಮನೆಯಲ್ಲಿದ್ದ ಫೈಬರ್ ಕುರ್ಚಿ ಮೇಲೆ ಕುಳಿತುಕೊಂಡು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಂಜೇಶ್ವರ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಕೆಟ್ಟುಹೋಗಿದ್ದ ಟಿವಿ ಅಂಗಡಿಗೆ ಕೊಂಡೊಯ್ಯಲಾಗಿದ್ದು, ಟಿವಿ ಇಲ್ಲದಿರುವ ಚಿಂತೆ ಅವರನ್ನು ಕಾಡುತ್ತಿತ್ತು ಎಂದು ಅವರ ಪುತ್ರ ಗುರುಪ್ರಸಾದ್ ಪ್ರಭು ತಿಳಿಸಿದ್ದಾರೆ.
ಗೃಹಿಣಿ ಮೃತದೇಹ ಪತ್ತೆ