ಕಾಸರಗೋಡು: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಮಾವುಂಗಾಲ್‌ನಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ತಂಡವೊಂದು ಮಹಿಳೆ ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಡಿಕ್ಕಿ ಹೊಡೆದು ಆಕೆಯನ್ನು ಬೀಳಿಸಿ ಮೂರು ಪವನ್ ಕರಿಮಣಿ ಸರ ಕಸಿದು ಪರಾರಿಯಾಗಿದೆ.
ಮಾವುಂಗಾಲ್ ನೆಲ್ಲಿತ್ತರ ಕ್ಯಾಂಪ್ಕೊ ಸನಿಹದ ಫುಡ್ ಪ್ರಾಡಕ್ಟ್ ಸಂಸ್ಥೆ ನೌಕರೆ, ಪುಲಯನಡ್ಕ ನಿವಾಸಿ ರವಿ ಎಂಬುವರ ಪತ್ನಿ ಕೆ.ಸಿಂಧು(42) ಚಿನ್ನ ಕಳೆದುಕೊಂಡವರು. ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ವೇಳೆಗೆ ಘಟನೆ ನಡೆದಿದೆ.
ಹೊಸದುರ್ಗ ಠಾಣೆ ಎಎಸ್‌ಐ ಕೆ.ದಿನೇಶ್ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಹುಡುಕಾಟ ಆರಂಭಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಗಳನ್ನು ಪೊಲೀಸರು ಕಲೆಹಾಕಿದ್ದಾರೆ.