ಸ್ಕೂಟರ್‌ನಿಂದ ಬಿದ್ದು ಮಹಿಳೆ ಮೃತ್ಯು

death
death
Published on
ಕಾಸರಗೋಡು: ಸ್ಕೂಟರ್‌ನಿಂದ ಬಿದ್ದು ಶಾಲಾ ಮಧ್ಯಾಹ್ನದೂಟ ತಯಾರಿ ಕಾರ್ಮಿಕೆ ಚೆಮ್ಮಾಡು ಪೆರುಂಬಳ ಕಣಿಯಾಲ ನಿವಾಸಿ ಡಿ.ರಾಜೇಂದ್ರನ್ ಪತ್ನಿ ಎಂ.ನಾರಾಯಣಿ(61) ಮೃತಪಟ್ಟಿದ್ದಾರೆ.
ಬೆದಿರ ಪಿಟಿಎಂ ಎಂಯುಪಿ ಶಾಲಾ ಅಡುಗೆ ಕಾರ್ಮಿಕೆಯಾಗಿದ್ದ ಅವರು ಬುಧವಾರ ಬೆಳಗ್ಗೆ ಮನೆಯಿಂದ ಸ್ಕೂಟರ್ ಹಿಂಬದಿ ಕುಳಿತು ಶಾಲೆಗೆ ತೆರಳುತ್ತಿದ್ದ ಸಂದರ್ಭ ಪೆರುಂಬಳ ಸೇತುವೆ ಬಳಿ ಆಯತಪ್ಪಿ ಸ್ಕೂಟರಿಂದ ಬಿದ್ದಿದ್ದರು. ಗಂಭೀರ ಗಾಯಗೊಂಡ ಅವರನ್ನು ತಕ್ಷಣ ನಗರದ ಖಾಸಗಿ ದಾಖಲಿಸಿದರೂ ಪ್ರಯೋಜನವಾಗಲಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net