ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪತ್ರಕರ್ತ ರವೀಂದ್ರ ಕೋಟ ಮಾತನಾಡಿದರು. ಪ್ರಮುಖರಾದ ಮಹೇಶ್ ಬೆಳಗಾವಿ, ವೆಂಕಟೇಶ ಉಡುಪ, ಮಮತಾ ಇದ್ದರು.
ಕೋಟ: ಪ್ರಕೃತಿ ಇಲ್ಲದೆ ಮನುಕುಲವಿಲ್ಲ. ಮನುಕುಲಕ್ಕೆ ಅಗತ್ಯವಾದ ಪ್ರಕೃತಿಯನ್ನು ನಿರಂತರ ಹಾನಿಗೊಳಿಸುವ ಕಾರ್ಯ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಪ್ರಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯ ವಾಡಬೇಕು ಎಂದು ಪತ್ರಕರ್ತ ರವೀಂದ್ರ ಕೋಟ ಹೇಳಿದರು.
ಕೋಟದ ವಿವೇಕ ವಿದ್ಯಾಸಂಸ್ಥೆಗಳ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ಇಕೋ ಕ್ಲಬ್ ಆಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಸಂದೇಶ ನೀಡಿದರು.
ಶಾಲಾ ಕೈತೋಟದಲ್ಲಿ ಬೆಂಡೆ ಬೀಜ ನೆಟ್ಟು ವಿದ್ಯಾರ್ಥಿಗಳಿಗೆ ಸಾವಯವ ತರಕಾರಿ ಬೆಳೆಯುವ ಬಗ್ಗೆ ಮಾಹಿತಿ ನೀಡಲಾಯಿತು. ಪರಿಸರಪ್ರೇಮಿ ಮಹೇಶ್ ಬೆಳಗಾವಿ ವಿದ್ಯಾರ್ಥಿಗಳಿಗೆ ಪರಿಸರ ಪ್ರತಿಜ್ಞಾವಿಧಿ ಬೋಧಿಸಿದರು.
ವಿವೇಕ ಬಾಲಕಿಯರ ಪ್ರೌಢಶಾಲಾ ಮುಖ್ಯಶಿಕ್ಷಕ ವೆಂಕಟೇಶ ಉಡುಪ ಅಧ್ಯಕ್ಷತೆ ವಹಿಸಿದ್ದರು. ಇಕೋ ಕ್ಲಬ್ ಸಂಚಾಲಕಿ ಶಿಕ್ಷಕಿ ಮಮತಾ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನಘಾ ಹೊಳ್ಳ ನಿರೂಪಿಸಿದರು. ಇಕೋ ಕ್ಲಬ್ ಕಾರ್ಯದರ್ಶಿ ಅಮೂಲ್ಯ ವಂದಿಸಿದರು.
-----ಫೋಟೋ-----
ಕೋಟ.ಜೂ.5 ವಿವೇಕ ಪರಿಸರ ದಿನ
ಕೋಟ ವಿವೇಕ ಬಾಲಕಿಯರ ಪ್ರೌಢಶಾಲೆಯಲ್ಲಿ ನಡೆದ ವಿಶ್ವ ಪರಿಸರ ದಿನ ಕಾರ್ಯಕ್ರಮದಲ್ಲಿ ಪತ್ರಕರ್ತ ರವೀಂದ್ರ ಕೋಟ ಮಾತನಾಡಿದರು. ಪ್ರಮುಖರಾದ ಮಹೇಶ್ ಬೆಳಗಾವಿ, ವೆಂಕಟೇಶ ಉಡುಪ, ಮಮತಾ ಇದ್ದರು.