ಕಾರ್ಕಳ: ಕ್ಯಾನ್ಸರ್ ಗೆಲ್ಲಲು ಸಾಧ್ಯವಿಲ್ಲ ಎಂಬ ತಪ್ಪು ಕಲ್ಪನೆಯಿಂದ ರೋಗಿಗಳು ಮೊದಲು ಹೊರಬರಬೇಕು. ದುಶ್ಚಟಗಳಿಂದ ದೂರವಿದ್ದು, ಜಂಕ್ ಫುಡ್, ಕರಿದ ಪದಾರ್ಥ, ಸಕ್ಕರೆ, ಮೈದಾ ತ್ಯಜಿಸುವುದು, ನಿಯಮಿತ ವ್ಯಾಯಾಮ, ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಕೊನೆಯ ಹಂತದ ಕ್ಯಾನ್ಸರನ್ನೂ ಗೆದ್ದಿರುವ ಹಲವು ಉದಾಹರಣೆಗಳಿವೆ ಎಂದು ಮನಃಶಾಸ್ತ್ರಜ್ಞೆ ಜ್ಯೇಷ್ಠಲಕ್ಷ್ಮೀ ಮಂಗಳೂರು ಹೇಳಿದರು.