ಕುಕ್ಕೆಯಲ್ಲಿ ಗಾಳಿ-ಮಳೆಗೆ ಹಲೆವೆಡೆ ಹಾನಿ

 ಭಾರಿ ಮಳೆಗೆ ಅಗ್ರಹಾರ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು.
ಭಾರಿ ಮಳೆಗೆ ಅಗ್ರಹಾರ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬ ಮುರಿದು ಬಿದ್ದಿರುವುದು.
Published on
ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಸೇರಿದಂತೆ ಇಲ್ಲಿನ ಪರಿಸರದ ಕುಮಾರಧಾರಾ, ಅಗ್ರಹಾರ, ಕುಲ್ಕುಂದ, ಕುಲ್ಕುಂದ ಕಾಲನಿ, ಪರ್ವತಮುಖಿ ಇತ್ಯಾದಿ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಸುರಿದ ಭಾರಿ ಗಾಳಿ-ಮಳೆಗೆ ಅಪಾರ ಹಾನಿ ಸಂಭವಿಸಿದೆ.
ಅಗ್ರಹಾರದಲ್ಲಿ ವಿದ್ಯುತ್ ತಂತಿ ಮೇಲೆ ಮರ ಬಿದ್ದು ವಿದ್ಯುತ್ ಕಂಬ ಮುರಿದಿದೆ. ಇದರಿಂದಾಗಿ ಸುಬ್ರಹ್ಮಣ್ಯ-ಅಗ್ರಹಾರ ರಸ್ತೆ ಸಂಚಾರ ಬಂದ್ ಆಗಿತ್ತು. ಕುಲ್ಕುಂದ ಕಾಲನಿ ಮತ್ತು ಪರ್ವತಮುಖಿಯಲ್ಲಿ ಮನೆ ಮೇಲೆ ಮರ ಬಿದ್ದು ಅಪಾರ ನಷ್ಟ ಉಂಟಾಗಿದೆ. ಪರ್ವತಮುಖಿ, ಕುಲ್ಕುಂದ, ಕುಲ್ಕುಂದ ಕಾಲನಿ ಬಳಿ ಮರ ವಿದ್ಯುತ್ ತಂತಿ ಮೇಲೆ ಉರುಳಿ ವಿದ್ಯುತ್ ಕಂಬ ಮುರಿದಿದೆ.
ಈ ಪ್ರದೇಶದಲ್ಲಿ 13ಕ್ಕೂ ಅಧಿಕ ಕಂಬ ಉರುಳಿ ಬಿದ್ದು ಮೆಸ್ಕಾಂ ಇಲಾಖೆಗೆ ಅಪಾರ ನಷ್ಟ ಸಂಭವಿಸಿದೆ. ಬುಧವಾರ ಮುಂಜಾನೆಯಿಂದ ಸುಬ್ರಹ್ಮಣ್ಯ ಪರಿಸರದಲ್ಲಿ ಮೆಸ್ಕಾಂ ಸಹಾಯಕ ಇಂಜಿನಿಯರ್ ಚಿದಾನಂದ ಕೆ. ನೇತೃತ್ವದಲ್ಲಿ ಮೆಸ್ಕಾಂ ಸಿಬ್ಬಂದಿ ವಿದ್ಯುತ್ ವ್ಯವಸ್ಥೆ ಸಮರ್ಪಕಗೊಳಿಸುವ ಕಾರ್ಯ ನಡೆಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net