ನಂದಳಿಕೆ ಗ್ರಾಮದ ಬೈರಾಬೆಟ್ಟು ಎಂಬಲ್ಲಿ ಕುಶಲ ಪೂಜಾರ್ತಿ ಅವರ ಮನೆಯ ಮೇಲ್ಛಾವಣಿಗೆ ಹಾನಿಯಾಗಿದೆ. ನಂದಳಿಕೆ ಗ್ರಾಮದ ಕಕ್ಕೆಪದವು ನಿವಾಸಿ ಪುಷ್ಪಾ ಅವರ ಮನೆಯ ಹೆಂಚುಗಳು ಗಾಳಿಗೆ ಹಾರಿ ನಷ್ಟವಾಗಿದೆ. ಸರೋಜಿನಿ ಶೆಟ್ಟಿ ಎಂಬುವರ ಮನೆ ಛಾವಣಿಗೆ ಹಾನಿಯುಂಟಾಗಿದೆ. ರಾಘು ಶೆಟ್ಟಿ ಎಂಬುವರ ಮನೆ ಮೇಲೆ ಮರ ಬಿದ್ದು ಹಾನಿಯಾಗಿದೆ.