ಪೆರ್ನಾಜೆಯಲ್ಲಿ ಮತ್ತೆ ಕಾಡಾನೆ ಹಾವಳಿ

 ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯ ಕೃಷಿಕ ಕುಮಾರ್ ಅವರ ತೋಟಕ್ಕೆ ಗುರುವಾರ ಕಾಡಾನೆ ಲಗ್ಗೆಯಿಟ್ಟು ಬಾಳೆಕೃಷಿ ನಾಶಪಡಿಸಿದೆ.
ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆಯ ಕೃಷಿಕ ಕುಮಾರ್ ಅವರ ತೋಟಕ್ಕೆ ಗುರುವಾರ ಕಾಡಾನೆ ಲಗ್ಗೆಯಿಟ್ಟು ಬಾಳೆಕೃಷಿ ನಾಶಪಡಿಸಿದೆ.
Published on
ಪುತ್ತೂರು ಗ್ರಾಮಾಂತರ: ನೆಟ್ಟಣಿಗೆ ಮುಡ್ನೂರು ಗ್ರಾಮದ ಪೆರ್ನಾಜೆ ವ್ಯಾಪ್ತಿಗೆ ತಿಂಗಳ ಬಳಿಕ ಮತ್ತೆ ಕಾಡಾನೆ ಲಗ್ಗೆಯಿಟ್ಟು ಕೃಷಿ ಹಾನಿ ಮಾಡಿದೆ. ಇದರಿಂದ ಪಕ್ಕದ ಕೊಳ್ತಿಗೆ, ಮಾಡ್ನೂರು, ಕೆಯ್ಯೂರು ಗ್ರಾಮ ವ್ಯಾಪ್ತಿಯ ಕೃಷಿಕರಲ್ಲಿ ಮತ್ತೆ ಆತಂಕ ಸೃಷ್ಟಿಯಾಗಿದೆ.
ಪೆರ್ನಾಜೆ ಕೃಷಿ ಪ್ರದೇಶಕ್ಕೆ ಗುರುವಾರ ರಾತ್ರಿ ಕೃಷಿಕರಾದ ಕುಮಾರ್ ಪೆರ್ನಾಜೆ, ರಾಘವೇಂದ್ರ ಭಟ್, ಶಂಕರ ನಾರಾಯಣ ಭಟ್ ಹಾಗೂ ಸುಳ್ಯ ತಾಲೂಕು ವ್ಯಾಪ್ತಿಯ ಕಲ್ಲರ್ಪೆಯ ಹೊನ್ನಪ್ಪ ಗೌಡ ಅವರ ತೋಟಗಳಿಗೆ ನುಗ್ಗಿದ ಕಾಡಾನೆ ಬಾಳೆಗಿಡಗಳನ್ನು ನಾಶಪಡಿಸಿದೆ. ತೋಟದ ಕೆರೆಯಲ್ಲಿ ಈಜಾಡಿ ಬಳಿಕ ನೂಜಿಬೈಲು, ಅಂಕೋತಿಮಾರು ಕಡೆಗೆ ತೆರಳಿದೆ ಎಂದು ಪ್ರಗತಿಪರ ಕೃಷಿಕ ಕುಮಾರ್ ಮಾಹಿತಿ ನೀಡಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net