ದೇವರಗುಂಡದಲ್ಲಿ ಕಾಡಾನೆ ಹಾವಳಿ

 ಕಾಡಾನೆ ಹಾವಳಿಯಿಂದ ದೇವರಗುಂಡ ಭಾಗದಲ್ಲಿ ಕೃಷಿ ಹಾನಿಯಾಗಿರುವುದು.
ಕಾಡಾನೆ ಹಾವಳಿಯಿಂದ ದೇವರಗುಂಡ ಭಾಗದಲ್ಲಿ ಕೃಷಿ ಹಾನಿಯಾಗಿರುವುದು.
Published on

ಸುಳ್ಯ

: ಕರ್ನಾಟಕ- ಕೇರಳ ಗಡಿ ಪ್ರದೇಶವಾದ ಮಂಡೆಕೋಲು ಗ್ರಾಮದ ದೇವರಗುಂಡ ಭಾಗದಲ್ಲಿ ಕಾಡಾನೆಗಳ ದಾಳಿಗೆ ಅಪಾರ ಕೃಷಿ ಹಾನಿಯಾಗಿದೆ.

ಸೋಮವಾರ ರಾತ್ರಿ ಕೃಷಿ ತೋಟಕ್ಕೆ ಲಗ್ಗೆಯಿಟ್ಟಿರುವ ಕಾಡಾನೆಗಳ ಹಿಂಡು ತೆಂಗು, ಅಡಿಕೆ, ಬಾಳೆ ಸಹಿತ ಕೃಷಿಯನ್ನು ನಾಶಪಡಿಸಿವೆ. ತೋಟದಲ್ಲಿರುವ ಪೈಪ್, ಡ್ರಂಗಳನ್ನೂ ಧ್ವಂಸಗೊಳಿಸಿವೆ. ದೇವರಗುಂಡ, ಬೊಟ್ಟುಕಲ್ಲು ಭಾಗದಲ್ಲಿ ಅರಣ್ಯ ಭಾಗದಿಂದ ಪಯಸ್ವಿನಿ ನದಿ ದಾಟಿ ಬರುವ ಕಾಡಾನೆಗಳ ಹಾವಳಿ ಮಿತಿಮೀರಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net