

ಕಾಡಾನೆ ಜನವಸತಿ ಪ್ರದೇಶದತ್ತ ತೆರಳದಂತೆ ಹಗಲು ಹೊತ್ತಿನಲ್ಲಿ ಸಿಬ್ಬಂದಿ ನಿರಂತರ ನಿಗಾ ವಹಿಸಿದ್ದರು. ರಾತ್ರಿ ವೇಳೆ ಆನೆಯನ್ನು ಕಾಡಿನತ್ತ ಅಟ್ಟುವ ಕಾರ್ಯಾಚರಣೆ ನಡೆಸಿದ್ದು ಆನೆ ಕಾಡಿನತ್ತ ತೆರಳಿದೆ. ಹಗಲು ಹಾಗೂ ರಾತ್ರಿ ಪಾಳಿಗೆ ಪ್ರತ್ಯೇಕ ತಂಡಗಳನ್ನು ರಚಿಸಲಾಗಿದ್ದು, ತಂಡ ಸ್ಥಳದಲ್ಲಿದ್ದು ಮುನ್ನೆಚ್ಚರಿಕೆ ಕ್ರಮ ವಹಿಸಿದೆ.