

ಕೊಕ್ಕಡ: ಇಲ್ಲಿನ ಪಾರ್ಪಿಕಲ್ಲು ಸಮೀಪ ಧರ್ಬೆತಡ್ಕ ನಿವಾಸಿ ಯಕ್ಷಗಾನ ಕಲಾವಿದ ದಿನಕರ ಗೋಖಲೆ ಅವರ ಮನೆ ಅಂಗಳಕ್ಕೆ ಮಂಗಳವಾರ ತಡರಾತ್ರಿ ಕಾಡಾನೆ ದಾಳಿ ಮಾಡಿ ಬಾಳೆಗಿಡ, ತೆಂಗಿನ ಗಿಡಗಳಿಗೆ ಹಾನಿ ಮಾಡಿ ಅಪಾರ ನಷ್ಟ ಉಂಟುಮಾಡಿದೆ.
ಪಕ್ಕದಲ್ಲಿ ಅಡಿಕೆ ಒಣಗಿಸುವ ಸೋಲಾರ್ ಶೆಡ್‌ಗೂ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಪರಿಶೀಲಿಸಿದರು.