ಬೀರಮೂಲೆಯ ಕೃಷಿಕ ಸೂರ್ಯನಾರಾಯಣ ಭಟ್ ಅವರ ತೆಂಗಿನ ತೋಟದಲ್ಲಿ ಕಾಟಿಗಳ ದೊಡ್ಡ ಹಿಂಡು ಕಂಡುಬಂದಿದೆ. ಕುಳದಪಾರೆ, ಈಂದುಮೂಲೆ ಗಡಿ ಪ್ರದೇಶದಲ್ಲಿ ಪದೇಪದೆ ಕಾಟಿಗಳು ಕಾಣಿಸಿಕೊಳ್ಳುತ್ತಿದ್ದರೂ ಭಾರಿ ಸಂಖ್ಯೆಯ ಕಾಟಿಗಳು ಏಕಕಾಲಕ್ಕೆ ಕಂಡು ಬಂದಿರುವುದು ಇದೇ ಮೊದಲು ಎಂದು ಕೃಷಿಕರು ಆತಂಕ ವ್ಯಕ್ತಪಡಿಸಿದ್ದಾರೆ.
ಅರ್ತಿಕೂಡ್ಲುವಿನಿಂದ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ದೇಶಮೂಲೆ ತನಕ 9 ಕಿ.ಮೀ. ವ್ಯಾಪ್ತಿಯಲ್ಲಿ ಅಳವಡಿಸಿದ್ದ ಸೋಲಾರ್ ಬೇಲಿ ನಾಶವಾಗಿದ್ದು, ಕಾಟಿಗಳ ಸಹಿತ ಕಾಡುಪ್ರಾಣಿಗಳು ಹಿಂಡುಹಿಂಡಾಗಿ ಕೃಷಿಭೂಮಿಗೆ ನುಗ್ಗುತ್ತಿವೆ. ಅರಣ್ಯ ಇಲಾಖೆ ತುರ್ತು ಕ್ರಮಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.