ವಿಚಾರಣೆ ನಡೆಸಿದಾಗ ಕುವೆಟ್ಟು ಗ್ರಾಮದ ಆಲಾದಿಕೊಟ್ಟಿಗೆ ನಿವಾಸಿ ಹಮ್ಜತ್ ಕರಾರ್ ಎಂಬಾತನಿಗೆ 20 ಸಾವಿರ ರೂ. ನೀಡಿ 500 ಗ್ರಾಂ ಗಾಂಜಾ ಖರೀದಿಸಿದ್ದು, ಆತ ಕಾರನ್ನು ಬಿಟ್ಟು ಪರಾರಿಯಾಗಿರುವುದಾಗಿ ತಿಳಿಸಿದ್ದಾನೆ. ಪೊಲೀಸರು ಕಾರನ್ನು ಪರಿಶೀಲಿಸಿದಾಗ ಅದರೊಳಗೆ 7.60 ಲಕ್ಷ ರೂ.ಮೌಲ್ಯದ 76 ಗ್ರಾಂ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದೆ. ಒಟ್ಟು 15,41,698 ರೂ.ಮೌಲ್ಯದ ವಸ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತ್ವಲಹ್ ಮತ್ತು ಹಮ್ಜತ್ ಕರಾರ್ ವಿರುದ್ಧ ಪ್ರಕರಣ ದಾಖಲಾದೆ. ಬಂಧಿತ ತ್ವಲಹ್‌ನನ್ನು ನ್ಯಾಯಾಧೀಶರ ನಿವಾಸಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.