ಪಶ್ಚಿಮ ಬಂಗಾಳದ ಬಾಲಕ ಪಾಲಕರ ವಶಕ್ಕೆ

ಉಡುಪಿ ರೈಲ್ವೆ ನಿಲ್ದಾಣದಲ್ಲಿಒಂಟಿಯಾಗಿ ಪತ್ತೆಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಬಾಲಕನನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು.
ಉಡುಪಿ ರೈಲ್ವೆ ನಿಲ್ದಾಣದಲ್ಲಿಒಂಟಿಯಾಗಿ ಪತ್ತೆಯಾಗಿದ್ದ ಪಶ್ಚಿಮ ಬಂಗಾಳ ಮೂಲದ ಬಾಲಕನನ್ನು ಪಾಲಕರಿಗೆ ಹಸ್ತಾಂತರಿಸಲಾಯಿತು.
Published on

* ಉಡುಪಿ ರೈಲ್ವೆ ನಿಲ್ದಾಣದಲ್ಲಿ ಒಂಟಿಯಾಗಿ ಪತ್ತೆ

ಉಡುಪಿ: ಉಡುಪಿ ರೈಲ್ವೆ ನಿಲ್ದಾಣದಲ್ಲಿಒಂಟಿಯಾಗಿ ಪತ್ತೆಯಾಗಿದ್ದ ಪಶ್ಚಿಮ ಬಂಗಾಳ ಮೂಲದ 11 ವರ್ಷದ ಬಾಲಕನನ್ನು ಆತನ ಹೆತ್ತವರ ವಶಕ್ಕೆ ನೀಡುವಲ್ಲಿ ಪೊಲೀಸ್​ ಇಲಾಖೆ ಯಶಸ್ವಿಯಾಗಿದೆ.
ಜನವರಿ ತಿಂಗಳಲ್ಲಿ ಉಡುಪಿ ರೈಲ್ವೆ ನಿಲ್ದಾಣದಲ್ಲಿ ಒಬ್ಬಂಟಿಯಾಗಿದ್ದ ಬಾಲಕನನ್ನು ಆತನ ಪಾಲಕರ ಹೆಸರು, ವಿಳಾಸ ತಿಳಿಯದ್ದರಿಂದ ಉಡುಪಿಯ ಕುಂಜಿಬೆಟ್ಟು ಬಾಲಕರ ಬಾಲಮಂದಿರದಲ್ಲಿ ಆಶ್ರಯ ಒದಗಿಸಲಾಗಿತ್ತು.
ಜಿಲ್ಲಾ ಪೊಲೀಸ್​ ವರಿಷ್ಠ ಹರಿರಾಮ್​ ಶಂಕರ್​ ಅವರ ಮೌಖಿಕ ಆದೇಶದಂತೆ ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಅಧೀಕ್ಷಕರು ಮತ್ತು ಪಶ್ಚಿಮ ಬಂಗಾಳ ರಾಜ್ಯದ ದಕ್ಷಿಣ ಧೀನಜಪುರ್​ ಜಿಲ್ಲೆಯ ಗಂಗರಾಂಪುರ ಪೊಲೀಸ್​ ಠಾಣೆ ಅಧಿಕಾರಿಗಳ ಸಹಕಾರದಿಂದ ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್​ ಸಿಬ್ಬಂದಿ ಸಂಪಾ ಶೆಟ್ಟಿ ಬಾಲಕನನ್ನು ಹೆತ್ತವರಿಗೆ ಒಪ್ಪಿಸಿದ್ದಾರೆ.
ತಾಯಿ ಸಾಧನಾ ಮಂಡಲ್​ ಎಂಬವರು ಮಹಾರಾಷ್ಟ್ರದ ಕಲ್ಯಾಣ ಜಿಲ್ಲೆಯ ಟಿಟ್ವಾಲದಲ್ಲಿ ಇರುವ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಂಪಾ ಶೆಟ್ಟಿ, ಅವರನ್ನು ಸಂಪರ್ಕಿಸಿ ಬಾಲಕ ಉಡುಪಿಯಲ್ಲಿ ಇರುವ ವಿಚಾರ ತಿಳಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಜು.30ರಂದು ಬಾಲಕನ ಪಾಲಕರು ಉಡುಪಿಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾದರು. 
ಸೂಕ್ತ ದಾಖಲಾತಿ ನೀಡಿ ಬಾಲಕನನ್ನು ತಮ್ಮೊಂದಿಗೆ ಕರೆದುಕೊಂಡು ಹೋದರು. ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್​ ಸಿಬ್ಬಂದಿ ಸಂಪಾ ಶೆಟ್ಟಿ ಅವರ ಕಾರ್ಯದಕ್ಷತೆಯನ್ನು ಎಸ್ಪಿ ಹರಿರಾಮ್​ ಪ್ರಸಂಶಿಸಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net