ಜಾತಿ ಒಡೆಯುವ ಸಂಚಿನ ಬಗ್ಗೆ ಜಾಗೃತರಾಗಬೇಕಿದೆ

 ಅಜೆಕಾರಿನಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಾದಿರಾಜ ಭಟ್ ಗೋಪಾಡಿ, ರಾವೇಂದ್ರ ಭಟ್, ಬಾಲಕೃಷ್ಣ ಹೆಗ್ಡೆ ಅಜೆಕಾರು, ಪ್ರಸನ್ನ ಇಂದ್ರ, ಶಂಕರ ಆಚಾರ್ಯ ಮೊದಲಾದವರಿದ್ದರು.
ಅಜೆಕಾರಿನಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ವಾದಿರಾಜ ಭಟ್ ಗೋಪಾಡಿ, ರಾವೇಂದ್ರ ಭಟ್, ಬಾಲಕೃಷ್ಣ ಹೆಗ್ಡೆ ಅಜೆಕಾರು, ಪ್ರಸನ್ನ ಇಂದ್ರ, ಶಂಕರ ಆಚಾರ್ಯ ಮೊದಲಾದವರಿದ್ದರು.
Published on
ಅಜೆಕಾರು: ಹಿಂದೂ ಸವಾಜ ಎಂದಿಗೂ ದ್ವೇಷವನ್ನು ಉತ್ತೇಜಿಸಿಲ್ಲ, ಯಾರೊಂದಿಗೂ ದ್ವೇಷವನ್ನು ಸಾಧಿಸಿಲ್ಲ. ಸವಾಜದಲ್ಲಿ ಸಹಬಾಳ್ವೆಯೊಂದಿಗೆ ಜೀವನ ನಡೆಸುತ್ತಿದೆ. ಆದರೆ ಪ್ರಸಕ್ತ ದಿನಗಳಲ್ಲಿ ಹಿಂದೂಗಳಲ್ಲಿನ ಜಾತಿಗಳನ್ನು ಒಡೆಯುವ ಮಹಾಸಂಚು ನಡೆಯುತ್ತಿದೆ. ಇಂತಹ ಪ್ರಯತ್ನದ ವಿರುದ್ಧ ಸಮಸ್ತ ಹಿಂದೂ ಸವಾಜ ಜಾಗೃತವಾಗಬೇಕಿದೆ ಎಂದು ಆರ್‌ಎಸ್‌ಎಸ್ ಕಾರ್ಯವಾಹ ವಾದಿರಾಜ ಭಟ್ ಗೋಪಾಡಿ ಹೇಳಿದರು.
ಅಜೆಕಾರಿನಲ್ಲಿ ಭಾನುವಾರ ನಡೆದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದರು.
ಕಾಡುಹೊಳೆ ಜಂಗಮೇಶ್ವರ ಮಠದ ಪ್ರಧಾನ ಅರ್ಚಕ ರಾವೇಂದ್ರ ಭಟ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿ ಬಾಲಕೃಷ್ಣ ಹೆಗ್ಡೆ ಅಜೆಕಾರು, ಪ್ರಸನ್ನ ಇಂದ್ರ, ಶಂಕರ ಆಚಾರ್ಯ, ಎಣ್ಣೆಹೊಳೆ ಜಂಗಮೇಶ್ವರ ಮಠದ ಅರ್ಚಕ ರಾಜೇಂದ್ರ ಎಣ್ಣೆಹೊಳೆ, ಕೃಷ್ಣ ಮೇರ, ಶೀನ ಗೌಡ ಅಂಡಾರು, ಕೊರಗ ಪಾಣಾರ, ನಿವೃತ್ತ ಶಿಕ್ಷಕ ಭಾಸ್ಕರ ಶೆಟ್ಟಿ ಕುಂಟಿನಿ, ಆನಂದ ಹೆಗ್ಡೆ ಹೆರ್ಮುಂಡೆ, ರವೀಂದ್ರ, ಕೃಷ್ಣ ಶೆಟ್ಟಿಗಾರ್ ಎಣ್ಣೆಹೊಳೆ, ಗಣಪತಿ ಭಂಡಾರಿ ಅಜೆಕಾರು, ಶಂಕರ ಶೇರಿಗಾರ್, ನಿವೃತ್ತ ಶಿಕ್ಷಕ ಜನಾರ್ದನ್ ನಾಯ್ಕ, ಉದ್ಯಮಿ ತಾರಾನಾಥ ಪೂಜಾರಿ, ಅಜೆಕಾರು ವಿಷ್ಣುಮೂರ್ತಿ ಭಜನಾ ಮಂಡಳಿ ಸ್ಥಾಪಕರಾದ ಭೋಜ ಮಡಿವಾಳ, ಮೋಹನ್ ದಾಸ್ ಜೋಗಿ, ಸದಾಶಿವ ಸಫಲಿಗ, ವಿನಿಲ್ ರಾಣೆ, ಬಾಲಕೃಷ್ಣ ಪಿ. ಮುಂತಾದವರು ಉಪಸ್ಥಿತರಿದ್ದರು. ಅರ್ಪಿತಾ ಸ್ವಾಗತಿಸಿದರು. ಸುಕೇಶ್ ಶೆಟ್ಟಿ ಎಣ್ಣೆಹೊಳೆ ವಂದಿಸಿದರು. ಅಕ್ಷತಾ ನಿರೂಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net