ಹೆದ್ದಾರಿ ವಿಸ್ತರಣೆ ಸಂದರ್ಭದಲ್ಲಿ ನೂಯಿ ಪ್ರದೇಶದಿಂದ ಲ್ಗುಣಿ ನದಿಗೆ ಹರಿಯುತ್ತಿರುವ ಪರಂಬೋಕು ತೋಡು ನೆಲಸಮಗೊಳಿಸಿ, ಮೇಲ್ಗಡೆ ಹೆದ್ದಾರಿ ನಿರ್ಮಿಸಲಾಗಿದೆ. ಪರಿಣಾಮ ಪರಂಬೋಕು ತೋಡಿನ ಬದಲಾಗಿ ಹೊಸದಾಗಿ ನಿರ್ಮಾಣಗೊಂಡ ಹೆದ್ದಾರಿ ಪಕ್ಕದ ಮನೆಗಳ ಬದಿಯಲ್ಲಿ ಮಳೆ ನೀರು ಹರಿಯಲಾರಂಭಿಸಿದೆ. ಧಾರಾಕಾರ ಮಳೆಗೆ ಇಲ್ಲಿನ ಮನೆಗಳು ಸಂಪೂರ್ಣ ಜಲಾವೃತಗೊಂಡು ಮನೆ ಮಂದಿಗೆ ಜಲದಿಗ್ಭಂಧನ ಕಾಯಂ. ಮನೆಯಲ್ಲಿ ಮಕ್ಕಳು, ಮಹಿಳೆಯರು, ವಯೋವೃದ್ಧರು ವಾಸಿಸುತ್ತಿದ್ದಾರೆ.