ನೀರು ಇಂಗಿಸುವಿಕೆ ಪ್ರಕೃತಿಗೆ ಪೂರಕ ಕಾರ್ಯ

 ಹೋಲಿರೆಡೀಮರ್ ಚರ್ಚ್‌ನಲ್ಲಿ ನಡೆದ ವೈಜ್ಞಾನಿಕ ನೀರು ಇಂಗಿಸುವಿಕೆಗೆ ಧರ್ಮಗುರು ವಾಲ್ಟರ್ ಡಿಮೆಲ್ಲೊ ಚಾಲನೆ ನೀಡಿದರು. ರಾಮ್ ಕುವಾರ್, ತುಕಾರಾಂ, ಹೊನ್ನಪ್ಪ ನೆಕ್ಕಿಲ್ಲ ಇತರರಿದ್ದರು.
ಹೋಲಿರೆಡೀಮರ್ ಚರ್ಚ್‌ನಲ್ಲಿ ನಡೆದ ವೈಜ್ಞಾನಿಕ ನೀರು ಇಂಗಿಸುವಿಕೆಗೆ ಧರ್ಮಗುರು ವಾಲ್ಟರ್ ಡಿಮೆಲ್ಲೊ ಚಾಲನೆ ನೀಡಿದರು. ರಾಮ್ ಕುವಾರ್, ತುಕಾರಾಂ, ಹೊನ್ನಪ್ಪ ನೆಕ್ಕಿಲ್ಲ ಇತರರಿದ್ದರು.
Published on
ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ
ಅನೇಕ ಕಡೆಗಳಲ್ಲಿ ಬಾವಿಗಳು ಒಣಗಿವೆ. ರೈತರು ಮಳೆಯ ನಿರೀಕ್ಷೆಯಲ್ಲಿ ಕಣ್ಣೀರಿಡುತ್ತಿದ್ದಾರೆ. ನೀರಿನ ಕೊರತೆ ಎದುರಾದಾಗ ನೀರಿನ ಬೆಲೆ ಅರ್ಥವಾಗುತ್ತದೆ. ದೇವರ ಕೃಪಾಕಟಾಕ್ಷದಿಂದ ದೊರೆತ ಮಳೆನೀರನ್ನು ಉಳಿಸುವ ಯೋಜನೆಗಳ ಕಾರ್ಯಗತಗೊಳಿಸಿ ಪ್ರಕೃತಿ ಪೂರಕ ಕಾರ್ಯ ಮಾಡಬೇಕು ಎಂದು ಧರ್ಮಗುರು ವಾಲ್ಟರ್ ಡಿಮೆಲ್ಲೊ ಹೇಳಿದರು.
ಬೆಳ್ತಂಗಡಿಯ ಹೋಲಿರೆಡೀಮರ್ ಚರ್ಚ್, ಚರ್ಚ್ ಪಾಲನಾ ಪರಿಷತ್ ಹಾಗೂ ಚರ್ಚಿನ ಐದು ಆಯೋಗಗಳ ಆಯೋಜನೆಯೊಂದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾವಾಭಿವೃದ್ಧಿ ಯೋಜನೆ ಬೆಳ್ತಂಗಡಿ ತಾಲೂಕು, ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ವೈಜ್ಞಾನಿಕವಾಗಿ ನೀರಿಂಗಿಸುವಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಳ್ತಂಗಡಿ ತಾಲೂಕು ಕೃಷಿ ಅಧಿಕಾರಿ ರಾಮ್ ಕುವಾರ್, ತಾಲೂಕು ಕಾರ್ಯನಿರತ ಪತ್ರಕರ್ತರ ಸಂದ ಅಧ್ಯಕ್ಷ ತುಕಾರಾಂ, ಪುತ್ತೂರಿನ ಸುದ್ದಿ ಅರಿವು ಕೇಂದ್ರದ ಹೊನ್ನಪ್ಪ ನೆಕ್ಕಿಲ್ಲ ಮಾತನಾಡಿದರು.
ಹೋಲಿ ರಿಡೀಮರ್ ಆಂಗ್ಲ ವಾಧ್ಯಮ ಶಾಲೆಯ ಮುಖ್ಯಶಿಕ್ಷಕ ಕ್ಲಿಪರ್ಡ್ ಸೈಮನ್ ಪಿಂಟೋ, ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಗಿಲ್ಬರ್ಟ್ ಪಿಂಟೋ, ಕೃಷಿ ಸಂಚಾಲಕರಾದ ಲಾರೆನ್ಸ್ ಡೇಸಾ, ಫೆಲಿಕ್ಸ್ ಕೊರೆಯಾ, ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಜನರಲ್ ವ್ಯಾನೇಜರ್ ವಿನ್ಸೆಂಟ್ ಲೋಬೊ, ಆಯೋಗಗಳ ಸಂಚಾಲಕರು ಹಾಗೂ ಚರ್ಚಿನ ವಿವಿಧ ವಾರ್ಡುಗಳ ಗುರಿಕಾರರು, ರೈತರು ಇದ್ದರು. ಸುನೀತಾ ಸ್ವಾಗತಿಸಿದರು. ಲವೀನಾ ಬೆನ್ನಿಸ್ ವಂದಿಸಿದರು. ತೋಮಸ್ ಪಿಂಟೋ ಕಾರ್ಯಕ್ರಮ ನಿರೂಪಿಸಿದರು.

ಧರ್ಮಗುರುಗಳ ಸಂಪೂರ್ಣ ಸಹಕಾರದಿಂದ ತಾಲೂಕಿನಲ್ಲಿಯೇ ವಾದರಿಯಾಗಿ ನೀರಿಂಗಿಸುವ ಯೋಜನೆಯನ್ನು ಚರ್ಚಿನಲ್ಲಿ ಜಾರಿಗೊಳಿಸಿದ್ದು, ಈ ಭಾಗದ ಎಲ್ಲರಿಗೂ ಯೋಜನೆಯ ಪ್ರಯೋಜನ ಸಿಕ್ಕಂತಾಗಿದೆ. ಭೂಮಿಗೆ ಬಿದ್ದ ನೀರನ್ನು ಜಾಗರೂಕತೆಯಿಂದ ಬಾವಿಗೆ ಅಥವಾ ಕೊಳವೆ ಬಾವಿಗೆ ಇಂಗಿಸಿದರೆ ಅಂತರ್ಜಲ ವೃದ್ಧಿಸಬಹುದು.

— ರಾಮ್ ಕುವಾರ್, ಬೆಳ್ತಂಗಡಿ ತಾಲೂಕು ಕೃಷಿ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net