

ಸಮಸ್ಯೆ ಬಗ್ಗೆ ಕಿವಿಗೊಡದ ಜಲಸಿರಿ ಅಧಿಕಾರಿಗಳಿಗೆ ತಡವಾಗಿ ಜ್ಞಾನೋದಯವಾಗುತ್ತದೆ. 24X7 ನೀರು ಕೊಡುವ ಬದಲು ಇಂತಿಷ್ಟು ಗಂಟೆಯೇ ನೀರು ಕೊಡುತ್ತೇವೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಿ. ಆಗ ಗ್ರಾಹಕರು ಅದಕ್ಕೆ ಹೊಂದಿಕೊಂಡು ಹೋಗುತ್ತಾರೆ. ಜಲಸಿರಿ ನಿರ್ವಹಣೆಯಲ್ಲಿ ಈಗಿನ ಅಧಿಕಾರಿಗಳು ಸಂಪೂರ್ಣ ವಿಫಲರಾಗಿದ್ದಾರೆ.
ಸಂಸ್ಥೆಗೆ ನೀಡಬೇಕಾದ ಹಣದ ವಿಚಾರ ಏನೇ ಇದ್ದರೂ ಸಾರ್ವಜನಿಕರಿಗೆ ತೊಂದರೆ ಮಾಡಬಾರದು. ಈ ನಿಟ್ಟಿನಲ್ಲಿ ಅಧಿಕಾರಿಗಳು ಗಮನಹರಿಸಬೇಕಿತ್ತು.
ನಿರ್ವಹಣೆ ವಾಡಿದ ಹಣವನ್ನು ಶೀಘ್ರವೇ ಪಾವತಿಸಲಾಗುವುದು. ನಿರ್ವಹಣೆ ಬಾಬ್ತು 6 ಲಕ್ಷ ರೂ. ಪಾವತಿಸಲು ಬಾಕಿ ಇದ್ದು ಕ್ರಮ ಕೈಗೊಳ್ಳಲಾಗುವುದು. ನೀರು ಸರಬರಾಜಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ.