ಸೊರಗಿದ ಬಾಡ ಬಿಯಾರ!

ನಿರ್ವಹಣೆ ಕೊರತೆಯಿಂದ ಬಿಯಾರ ಕೆರೆ ಸೊರಗಿರುವುದು.
ನಿರ್ವಹಣೆ ಕೊರತೆಯಿಂದ ಬಿಯಾರ ಕೆರೆ ಸೊರಗಿರುವುದು.
Published on


ವಿಜಯವಾಣಿಸುದ್ದಿಜಾಲ ಬೈಂದೂರು

ಬೈಂದೂರುಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿಸುಮಾರು 14ಸರ್ಕಾರಿಮದಗ(ಕೆರೆ)ಗಳಿವೆ.ಅವುಗಳಲ್ಲಿಬಹು ವಿಸ್ತಾರದ ಕೆರೆಗಳಲ್ಲೊಂದಾದಬಾಡ ಬಿಯಾರ ಕೆರೆ ಇತ್ತೀಚಿನವರ್ಷಗಳಲ್ಲಿ ನಿರ್ವಹಣೆ ಕೊರತೆಯಿಂದಸೊರಗಿದೆ.

ಇದನ್ನುಹೂಳೆತ್ತಿ,ಶಾಶ್ವತತಡೆಗೋಡೆ ನಿರ್ಮಾಣ ಮಾಡುವಂತೆಸ್ಥಳೀಯರು ಹಲವು ಬಾರಿ ಸಂಬಂಧಿತರಗಮನಕ್ಕೆ ತಂದರೂ,ಇದುವರೆಗೂಪ್ರಯೋಜನವಾಗಿಲ್ಲ.

ಜನಜಾನುವಾರುಗಳ ಜೀವನಾಡಿ

ಸುಮಾರು1.6 ಎಕರೆವಿಸ್ತೀರ್ಣ ಹೊಂದಿರುವ ಬಾಡ ಬಿಯಾರಕೆರೆ ಈ ಭಾಗದ ಜನ ಜಾನುವಾರುಗಳಜೀವನಾಡಿಯಾಗಿದೆ.ಕೆರೆಯಿಂದಾಗಿಅಂತರ್ಜಲವೃದ್ಧಿಸಿ ಬಿರುಬೇಸಿಗೆಯಲ್ಲಿಯೂ ಇದುವರೆಗೂಕುಡಿಯುವ ನೀರಿನ ಸಮಸ್ಯೆ ಕಾಡದಂತೆಕಾಪಾಡಿದೆ.ಸುಮಾರು15-16 ವರ್ಷದಹಿಂದೆ ಹೂಳೆತ್ತಲಾಗಿದೆ.ಆದರೆಇತ್ತೀಚಿನ ವರ್ಷಗಳಲ್ಲಿ ಪುನಃಹೂಳು ಶೇಖರಣೆಗೊಂಡಿದೆ.ಮೇಅಂತ್ಯದವರೆಗೂ ನೀರಿನ ಒರತೆಯಿದ್ದರೂ,ಸಮರ್ಪಕನಿರ್ವಹಣೆ ಮಾಡಿದರೆ ಮುಂಗಾರುಆರಂಭವಾಗುವ ತನಕವೂ ಇದರಲ್ಲಿನೀರು ತುಂಬಿರುತ್ತದೆ ಎನ್ನುತ್ತಾರೆಸ್ಥಳೀಯರು.

ಕೃಷಿಕರಜೀವನಾಡಿ

ಹಲವುವರ್ಷಗಳ ಹಿಂದೆ ಕೃಷಿಕರು ಈ ಭಾಗದಲ್ಲಿನೂರಾರು ಎಕರೆ ಕೃಷಿಭೂಮಿಯಲ್ಲಿಮಳೆಗಾಲದ ಬಳಿಕ ಎರಡನೇ ಬೆಳೆಬೆಳೆಯುತ್ತಿದ್ದು,ಬೆಳೆಗೆಈ ಕೆರೆಯ ನೀರನ್ನು ನೆಚ್ಚಿಕೊಂಡಿದ್ದರು.ಕೆರೆಯಲ್ಲಿಮಳೆಗಾಲದಲ್ಲಿ ಸುಮಾರು 12ಅಡಿಗೂಅಧಿಕ ನೀರು ತುಂಬಿರುತ್ತಿದ್ದು,ಬೇಸಿಗೆಯಲ್ಲಿನೀರಿನ ಸಂಗ್ರಹ ಕಡಿಮೆಯಾದರೂಮಳೆಗಾಲದ ಆರಂಭದವರೆಗೂ ನೀರಿನಒರತೆ ಇರುತ್ತದೆ.ಅದರಿಂದಬೈಂದೂರು ಪ.ಪಂ.ವ್ಯಾಪ್ತಿಯಬಾಡ,ಬಿಯಾರಮೊದಲಾದ ಭಾಗದ ನೂರಾರು ಮನೆಗಳಬಾವಿಗಳಲ್ಲಿ ಅಂತರ್ಜಲ ಹೆಚ್ಚಳವಾಗಿ,ಕುಡಿಯುವನೀರಿನ ಸಮಸ್ಯೆ ಎದುರಾಗುತ್ತಿರಲ್ಲಿಲ್ಲ,ಸಮರ್ಪಕನಿರ್ವಹಣೆಯಿಂದ ನಿವಾಸಿಗಳಿಗೆಇನ್ನಷ್ಟು ಅನುಕೂಲವಾಗುತ್ತದೆಎಂಬುದು ಸ್ಥಳೀಯರ ಅಭಿಪ್ರಾಯ.

ಅಪಾಯಕ್ಕೆಆಹ್ವಾನ

ಸಾರ್ವಜನಿಕರಸ್ತೆಗೆ ಹೊಂದಿಕೊಂಡಿರುವ ಈಕೆರೆ ಇತ್ತೀಚಿನ ವರ್ಷಗಳವರೆಗೂತಡೆಬೇಲಿಯಿಲ್ಲದೆ ಬಾಯ್ತೆರೆದುಕೊಂಡಿದ್ದು,ಅಪಾಯಕ್ಕೆಆಹ್ವಾನ ನೀಡುವುದಲ್ಲದೇ ಕೆರೆದಂಡೆವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು,ಶಾಶ್ವತತಡೆಗೋಡೆ ಅಗತ್ಯವಿದೆ.ಅಲ್ಲದೇಈ ಪರಿಸರದ ಜನರಿಗೆ ಅನುಕೂಲವಾಗುವಂತೆಸ್ಥಳೀಯಾಡಳಿತ 10ವರ್ಷದಹಿಂದೆ ಒಮ್ಮೆ ಈ ಕೆರೆಯ ಹೂಳೆತ್ತಿನಿರ್ವಹಣೆ ಮಾಡಿತ್ತು,ಆದರೆದಂಡೆಗೆ ತಡೆಗೋಡೆಯಿಲ್ಲದೆ ಪುನಃಹೂಳು ಶೇಖರಣೆಗೊಂಡಿದೆ.ನಿರ್ವಹಣೆಮಾಡಿದರೆ ಬೇಸಿಗೆಯಲ್ಲಿಯೂಇನ್ನಷ್ಟು ನೀರಿನ ಮೂಲವಾಗಿ ಜನಜಾನುವಾರುಗಳಿಗೆ ಸಹಕಾರಿಯಾಗುತ್ತಿತ್ತುಎಂಬುದು ಸ್ಥಳೀಯ ಕೃಷಿಕರ ಅಭಿಪ್ರಾಯ.

ಇಲ್ಲಿನ ಕೆರೆ ರಸ್ತೆಗೆ ಹೊಂದಿಕೊಂಡಿದ್ದು, ಅದು ಬಾಯ್ತರೆದುಕೊಂಡು ಅಪಾಯ ಎದುರಿಸುತ್ತಿರುವ ಬಗ್ಗೆ ಹಾಗೂ ಇದರ ಹೂಳೆತ್ತುವಂತೆ ಹಲವು ಬಾರಿ ಸಂಬಂಧಿತರಿಗೆ ಮನವಿ ಸಲ್ಲಿಸಲಾಗಿದೆ. ಆದಷ್ಟು ಶೀಘ್ರ ಆಡಳಿತ ವ್ಯವಸ್ಥೆ ಇದರ ನಿರ್ವಹಣೆಗಾಗಿ ಕ್ರಮ ಕೈಗೊಂಡರೆ ಈ ಭಾಗದ ನಿವಾಸಿಗಳಿಗೆ ಹಾಗೂ ಜಾನುವಾರುಗಳಿಗೆ ಸಾಕಷ್ಟು ಅನುಕೂಲವಾಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net