

ಮನುಷ್ಯರೇ ರಸ್ತೆಗಿಳಿಯದಂತಹ ಈ ಉರಿಬಿಸಿಲಿನಲ್ಲಿ ಗಿಡಮರ ಹಾಗೂ ಪ್ರಾಣಿ-ಪಕ್ಷಿಗಳಿಗೆ ನೀರುಣಿಸುವುದು ನಮ್ಮೆಲ್ಲರ ಕರ್ತವ್ಯ. ಈ ನಿಟ್ಟಿನಲ್ಲಿ ಯು.ಟಿ. ಖಾದರ್ ಅವರ ಭರವಸೆಯಂತೆ ವಾರಕ್ಕೊಂದು ಟ್ಯಾಂಕರ್ ಮೂಲಕ ಗಿಡಗಳಿಗೆ ಜೀವ ತುಂಬುವ ಕೆಲಸ ಮಾಡಲಾಗುತ್ತಿದೆ.
ಬೇಸಿಗೆಯ ಈ ಅವಧಿಯಲ್ಲಿ ಬಹುತೇಕ ಮರಗಳು ಎಲೆಗಳನ್ನು ಉದುರಿಸುತ್ತವೆ. ಈ ಸಂದರ್ಭ ನೀರುಣಿಸುವುದು ಉತ್ತಮ ಕಾರ್ಯ. ಪರಿಸರ ಕಾಳಜಿ ವಿಚಾರದಲ್ಲಿ ಸುರೇಶ್ ಅವರಂತಹ ಮನಸ್ಸಿನವರು ಸಿಗುವುದು ವಿರಳ.