

ರಾಜಸ್ಥಾನದ 500 ಮಿಮಿಗಿಂತ ಕಡಿಮೆ ಮಳೆಯಾಗುವ ಪ್ರದೇಶದಲ್ಲಿ ಮಳೆಕೊಯ್ಲು ಮೂಲಕ ನೀರಿನ ಸಂಗ್ರಹ ಮತ್ತು ವರ್ಷವಿಡೀ ಅದರ ಉಪಯೋಗ ಪಡೆಯುವ ಉದಾಹರಣೆ ನಮಗೆ ಮಾರ್ಗದರ್ಶವಾಗಬೇಕಾಗಿದೆ. ಕರ್ನಾಟಕಕ್ಕಿಂತ ಸುಮಾರು ಆರು ಪಟ್ಟು ಕಡಿಮೆ ಮಳೆಯಾಗುವಲ್ಲಿ ಜನರು ಮಳೆನೀರು ಸಂಗ್ರಹದ ಮೂಲಕ ತಮ್ಮ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ. ನಮಗೇಕೆ ಸಾಧ್ಯವಾಗುತ್ತಿಲ್ಲ ಎನ್ನುವುದು ಎಲ್ಲರೂ ಚಿಂತಿಸಬೇಕಾದ ವಿಷಯ.
ನಿತ್ಯ ನೀರಿನ ಸಮಸ್ಯೆಯಿಂದ ಕಂಗಾಲಾಗಿದ್ದೇವೆ, ಸಂಬಂಧಿಸಿದವರಿಗೆ ಮನವಿ ಮಾಡಿ ಸಾಕಾಗಿ ಹೋಗಿದೆ. ಜನರ ಗೋಳು ಕೇಳುವವರು ಯಾರು ಎನ್ನುವಂತಾಗಿದೆ. ಸುಬ್ಬಾರಾಡಿ ಡ್ಯಾಂ ಆದ ನಂತರ ಈ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಯುತ್ತದೆ ಎಂದಿದ್ದರು. ಅದೂ ಕೂಡ ಮರಿಚಿಕೆಯಾಗಿಯೇ ಉಳಿದಿದೆ. ಕುಡಿಯುವ ನೀರು ನೀಡಲು ಸಾಧ್ಯವಾಗದಿದ್ದರೆ ಗ್ರಾಮಸ್ಥರು ಸ್ಪಷ್ಟ ನಿರ್ಧಾರ ತೆಗದುಕೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.