ಭಾರಿ ಮಳೆಗೆ ರಸ್ತೆಗೆ ನುಗ್ಗಿದ ನೀರು

ಭಾರೀ ಮಳೆಗೆ ಮಳೆ ನೀರು ಸುಬ್ರಹ್ಮಣ್ಯದಲ್ಲಿ ರಸ್ತೆಯಲ್ಲಿಯೇ ಹರಿದು ಸಂಚಾರಕ್ಕೆ ಸಮಸ್ಯೆಯಾಯಿತು.
ಭಾರೀ ಮಳೆಗೆ ಮಳೆ ನೀರು ಸುಬ್ರಹ್ಮಣ್ಯದಲ್ಲಿ ರಸ್ತೆಯಲ್ಲಿಯೇ ಹರಿದು ಸಂಚಾರಕ್ಕೆ ಸಮಸ್ಯೆಯಾಯಿತು.
Published on

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಮಂಗಳವಾರ ಬೆಳಗ್ಗಿನಿಂದ ಸುರಿದ ನಿರಂತರ ಮಳೆಗೆ ಸುಬ್ರಹ್ಮಣ್ಯದ ರಸ್ತೆಗಳಲ್ಲಿ ನೀರು ಹರಿದು ರೋಡ್ ತೋಡಾಗಿ ಪರಿವರ್ತನೆಯಾಯಿತು. ಇದರಿಂದಾಗಿ ವಾಹನಗಳ ಸಂಚಾರ ಅಸ್ತವ್ಯಸ್ತವಾಯಿತು.

ಸುಬ್ರಹ್ಮಣ್ಯದ ಬೈಪಾಸ್ ರಸ್ತೆ, ಬಿಲದ್ವಾರ, ನೂಚಿಲ ರಸ್ತೆ, ಕುವಾರಧಾರಾ ಪೆಟ್ರೋಲ್ ಪಂಪ್ ಮುಂಭಾಗ ರಸ್ತೆಯಲ್ಲಿಯೇ ನೀರು ಹರಿದು ಜನಸಾಮಾನ್ಯರಿಗೆ ಸಂಕಷ್ಟ ಎದುರಾಯಿತು. ಕುವಾರಧಾರಾ ಕ್ರೀಡಾಂಗಣವು ಸಂಪೂರ್ಣ ನೀರಿನಿಂದ ಆವೃತ್ತವಾಯಿತು.

ರುದ್ರಪಾದ ಬ್ಲಾಕ್: ಭಾರೀ ಮಳೆಯಿಂದಾಗಿ ದರ್ಪಣತೀರ್ಥದಲ್ಲಿ ಬಂದ ಪ್ರವಾಹದಿಂದ ರುದ್ರಪಾದದಲ್ಲಿನ ಕಿರು ಸೇತುವೆ ಮುಳುಗಡೆಯಾಯಿತು. ಅಲ್ಲದೆ ನದಿ ನೀರು ಪಕ್ಕದ ಕೃಷಿ ತೋಟಗಳಿಗೆ ನುಗ್ಗಿ ಅಡಿಕೆ, ತೆಂಗಿನಕಾಯಿ ಕೊಚ್ಚಿ ಹೋಯಿತು. ನದಿ ಪ್ರವಾಹದಿಂದ ಅಜ್ಜಿಹಿತ್ಲು, ರುದ್ರಪಾದ ಮೊದಲಾದ ಕಡೆ ಮನೆ, ವಸತಿಗೃಹಗಳಿಗೆ ನೀರು ನುಗ್ಗಿತ್ತು. ವಾನಾಡು, ಕೋನಡ್ಕ ಮೊದಲಾದ ಕಡೆ ನದಿ ನೀರು ತೋಟಗಳಿಗೆ ನುಗ್ಗಿತ್ತು.
ಕುಲ್ಕುಂದ ಕಾಲನಿಯಲ್ಲಿ ನದಿ ನೀರು ಮಮನೆಗೆ ನುಗ್ಗಿತ್ತು .ಅಲ್ಲದೆ ಸುಬ್ರಹ್ಮಣ್ಯದ ಕಲ್ಲಪ್ಪಣೆ ಎಂಬಲ್ಲಿ ಮನೆಯೊಂದರ ಕಂಪೌಡ್ ಧಾರಾಶಾಯಿಯಾಗಿ ಮನೆಯ ಗೋಡೆಗಳಿಗೆ ಹಾನಿ ಸಂಭವಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net