ಲಖನೌ ಸಮೀಪದ ಕಾಕೋರಿ ಕ್ಷೇತ್ರದಲ್ಲಿ ಸ್ವಾಮೀಜಿ ಆನಂದಮತಿ ಮಾತಾಜಿಯವರ ಸಾನ್ನಿಧ್ಯದಲ್ಲಿ ಪದ್ಮಾವತಿ ದೇವಿಯ ವೇದಿ ಪ್ರತಿಷ್ಠಾಪನೆ ನೆರವೇರಿಸಿದರು. ನರೇಶ್ ಶಾಸ್ತ್ರಿ ಪೂಜಾವಿಧಿಗಳನ್ನು ನಡೆಸಿದರು. ಸಂದೀಪ್, ಸನ್ಮತ್, ಕೈಲಾಶ್ ಭಾರತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಸಿದ್ಧ ಕ್ಷೇತ್ರ ಅಯೋಧ್ಯೆಯಲ್ಲಿ ಅಧಿನಾಥ, ಅಜಿತನಾಥ, ಅನಂತನಾಥ, ಭರತ-ಬಾಹುಬಲಿ ಸ್ವಾಮಿ ಮಂದಿರಗಳ ದರ್ಶನ ಮಾಡಿದರು. ಶ್ರೀರಾಮ ಜನ್ಮಭೂಮಿ ಸೇರಿದಂತೆ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿದರು. ಗಣಿನಿ ಆರ್ಯಿಕೆ ಜ್ಞಾನಮತಿ ಮಾತಾಜಿ, ಚಂದನಮತಿ ಮಾತಾಜಿ ಹಾಗೂ ಪೀಠಾಧೀಶ ರವೀಂದ್ರಕೀರ್ತಿ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಭಗವಾನ್ ಅಧಿನಾಥ ಸ್ವಾಮಿಗೆ ಮಹಾಮಸ್ತಕಾಭಿಷೇಕ ನೆರವೇರಿತು.