ಕಾಸರಗೋಡು: ಜಿಲ್ಲೆಯಲ್ಲಿ, ಕೇರಳ ರಾಜ್ಯ ಸಾಕ್ಷರತಾ ಮಿಷನ್‌ನ 7ನೇ ತರಗತಿಯ ಸಮಾನತಾ ಕೋರ್ಸ್‌ನ 19ನೇ ಬ್ಯಾಚ್‌ಗಾಗಿ ನಡೆದ ಆರು ಪರೀಕ್ಷಾ ಕೇಂದ್ರಗಳಿಗೆ ವಿವಿಧ ಜನಪ್ರತಿನಿಧಿಗಳು ಭೇಟಿ ನೀಡಿ ಮೇಲ್ವಿಚಾರಣೆ ನಡೆಸಿದರು.
ಕಾಸರಗೋಡು ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಶಾಸಕ ಕಲ್ಲಟ್ರ ಮಾಹಿನ್ ಭೇಟಿ ನೀಡಿ ಕಲಿಕದಾರರೊಂದಿಗೆ ಸಂವಾದ ನಡೆಸಿದರು. ಕುಂಬಳೆ ಸರ್ಕಾರಿ ಹಿರಿಯ ಮಧ್ಯಮಿಕ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸಾಬು ಅಬ್ರಹಾಂ ಭೇಟಿ ನೀಡಿದರು. ಸಾಕ್ಷರತಾ ಮಿಷನ್ ಜಿಲ್ಲಾ ಸಂಯೋಜಕ ಸಿ.ಅಬ್ದುಲ್ ರಶೀದ್ ಮತ್ತು ವಿವಿಧ ಸಂಯೋಜಕರು ಪರೀಕ್ಷಾ ಮೇಲ್ವಿಚಾರಣೆ ನಡೆಸಿದರು.
ಪರೀಕ್ಷೆಗೆ 57 ಮಂದಿ ಹಾಜರಾಗಿದ್ದು, ಈ ಪೈಕಿ 16 ಮಂದಿ ಕನ್ನಡ ವಾಧ್ಯಮ ಮತ್ತು 41 ಮಂದಿ ಮಲಯಾಳ ವಾಧ್ಯಮದವರಾಗಿದ್ದಾರೆ. ನೀಲೇಶ್ವರದಲ್ಲಿ ಪರೀಕ್ಷೆ ಬರೆದ ವೈಕ್ಕತ್ ರಾವನ್ (80) ಅತ್ಯಂತ ಹಿರಿಯ ಪರೀಕ್ಷಾರ್ಥಿ ಬೋವಿಕಾನಂನಲ್ಲಿ ಪರೀಕ್ಷೆ ಬರೆದ ಪಿ.ಅಮಲ್ (18) ಅತ್ಯಂತ ಕಿರಿಯ ಪರೀಕ್ಷಾರ್ಥಿಯಾಗಿದ್ದಾರೆ.
ಮಲಯಾಳಂ, ಇಂಗ್ಲಿಷ್, ಹಿಂದಿ, ಸವಾಜ ವಿಜ್ಞಾನ, ಮೂಲ ವಿಜ್ಞಾನ ಮತ್ತು ಗಣಿತ ವಿಷಯಗಳಲ್ಲಿ ಪರೀಕ್ಷೆ ನಡೆಯಿತು. ಈ ಪರೀಕ್ಷೆಗಳಲ್ಲಿ ಉತ್ತೀರ್ಣರಾದವರಿಗೆ ಪ್ರಸಕ್ತ ವರ್ಷ 10ನೇ ತರಗತಿಯ ಸಮಾನತಾ ಪರೀಕ್ಷೆಗೆ ಹಾಜರಾಗಲು ಅವಕಾಶವಿದೆ.