ಸಂಸ್ಕಾರ ಕಲಿಸುವ ಜ್ಞಾನದೇಗುಲ ಶಾಲೆ

ಉಡುಪಿಯ ಸೌತ್​ ಶಾಲೆಯಲ್ಲಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ವೆಬ್​ಸೈಟ್​ ಉದ್ಘಾಟಿಸಿದರು. ಡಾ. ಅಶೋಕ್​ ಕಾಮತ್​, ಗಣೇಶ್​ ಶೇಟ್​, ಡಾ. ವಿರೂಪಾಕ್ಷ, ರಮೇಶ್​ ಹೆಗ್ಡೆ, ನಾಗೇಶ್​ ವಿ. ಪ್ರಭು,  ಕುಸುಮಾ, ಪೂರ್ಣಿಮಾ ಇತರರಿದ್ದರು.
ಉಡುಪಿಯ ಸೌತ್​ ಶಾಲೆಯಲ್ಲಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ವೆಬ್​ಸೈಟ್​ ಉದ್ಘಾಟಿಸಿದರು. ಡಾ. ಅಶೋಕ್​ ಕಾಮತ್​, ಗಣೇಶ್​ ಶೇಟ್​, ಡಾ. ವಿರೂಪಾಕ್ಷ, ರಮೇಶ್​ ಹೆಗ್ಡೆ, ನಾಗೇಶ್​ ವಿ. ಪ್ರಭು, ಕುಸುಮಾ, ಪೂರ್ಣಿಮಾ ಇತರರಿದ್ದರು.
Published on

* ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಆಶೀರ್ವಚನ

* ಉಡುಪಿ ಸೌತ್​ ಸ್ಕೂಲ್​ನಲ್ಲಿ ವೆಬ್​ಸೈಟ್​ ಉದ್ಘಾಟನೆ

ಉಡುಪಿ: ಶಾಲೆಗಳು ಕೇವಲ ಪಠ್ಯಪುಸ್ತಕದ ಜ್ಞಾನಕ್ಕಷ್ಟೇ ಸೀಮಿತವಲ್ಲ. ಅದು ಮಕ್ಕಳಿಗೆ ಜೀವನದ ಅತ್ಯಗತ್ಯ ಪಾಠ ಮತ್ತು ಸಂಸ್ಕಾರ ಕಲಿಸುವ ಜ್ಞಾನ ದೇಗುಲ. ಎಲ್ಲ ವಿದ್ಯಾರ್ಥಿಗಳೂ ಕಲಿಕೆಯಿಂದ ಸುಸಂಸ್ಕೃತರಾಗಬೇಕು ಎಂದು ಸೋದೆ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ನುಡಿದರು.
ಉಡುಪಿಯ ಒಳಕಾಡುನಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ಸೌತ್​ ಶಾಲೆ)ಯ ನಳಂದಾ ಸಭಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಗಳ ಸಂಘ ನೂತನವಾಗಿ ವಿನ್ಯಾಸಗೊಳಿಸಿದ ಅಧಿಕೃತ ವೆಬ್​ಸೈಟ್​ ಉದ್ಘಾಟಿಸಿ ಆಶೀರ್ವಚನ ನೀಡಿದರು.

ಅಭಿವೃದ್ಧಿಗೆ ಕೈಜೋಡಿಸಿ

ಡಯಟ್​ ಪ್ರಾಂಶುಪಾಲ ಹಾಗೂ ಶಾಲೆಯ ಮಾಜಿ ಮುಖ್ಯೋಪಾಧ್ಯಾಯ ಡಾ. ಅಶೋಕ್​ ಕಾಮತ್​ ಮಾತನಾಡಿ, ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಶಿಕ್ಷಣ ದೊರೆಯುತ್ತಿದೆ. ಹೀಗಾಗಿ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚುತ್ತಿದೆ. ಇದು ಹೆಮ್ಮೆಯ ವಿಷಯವಾದರೂ ಸಹ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾದಂತೆ ಶಾಲೆಯಲ್ಲಿ ಮೂಲಸೌಕರ್ಯದ ಅಗತ್ಯತೆಯೂ ಹೆಚ್ಚುತ್ತದೆ. ಹೀಗಾಗಿ ಹಳೆಯ ವಿದ್ಯಾರ್ಥಿಗಳು ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿ ಎಂದರು.
ಶಾಲೆಯ ಹಳೆಯ ವಿದ್ಯಾರ್ಥಿ ಆದರ್ಶ್​ ಎಂಬವರು ಕೊಡುಗೆಯಾಗಿ ನೀಡಿದ 'ಸೌಂಡ್​ ಮಿಕ್ಸರ್​' ಸಿಸ್ಟಮ್​ ಹಸ್ತಾಂತರಿಸಲಾಯಿತು. 
ಸಂಘದ ಅಧ್ಯಕ್ಷ ಗಣೇಶ್​ ಶೇಟ್​ ಅಧ್ಯಕ್ಷತೆ ವಹಿಸಿದ್ದರು. ಎಸ್​ಡಿಎಂಸಿ ಪ್ರಾಥಮಿಕ ವಿಭಾಗದ ಅಧ್ಯಕ್ಷ ಡಾ. ವಿರೂಪಾಕ್ಷ, ಎಸ್​ಡಿಎಂಸಿ ಪ್ರೌಢಶಾಲಾ ವಿಭಾಗದ ಅಧ್ಯಕ್ಷ ರಮೇಶ್​ ಹೆಗ್ಡೆ ಉಪಸ್ಥಿತರಿದ್ದರು. ವೆಬ್​ಸೈಟ್​ ಅಭಿವೃದ್ಧಿಪಡಿಸಿದ ಉಡುಪಿ ವೆಬ್​ ಸಲ್ಯೂಷನ್ಸ್​ ತಂಡದ ಶ್ರೀನಿಧಿ ಆಚಾರ್ಯ, ರವಿಪ್ರಸಾದ್​ ಮತ್ತು ಶಶಾಂಕ್​ ಪಾಲ್ಗೊಂಡಿದ್ದರು.
ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯಿನಿ ಕುಸುಮಾ ಸ್ವಾಗತಿಸಿದರು. ಪ್ರೌಢಶಾಲಾ ವಿಭಾಗದ ಮುಖ್ಯೋಪಾಧ್ಯಾಯಿನಿ ಪೂರ್ಣಿಮಾ ವಂದಿಸಿದರು. ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ನಾಗೇಶ್​ ವಿ. ಪ್ರಭು ಕಾರ್ಯಕ್ರಮ ನಿರ್ವಹಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net