

* ವಿಎಚ್ಪಿ ರಾಷ್ಟ್ರೀಯ ಅಧ್ಯಕ್ಷ ಅಲೋಕ್ ಕುಮಾರ್ ಕರೆ
ಯುಗ ಯುಗಗಳಲ್ಲೂ ಜೀವಂತ
ವಿಶ್ವ ಹಿಂದೂ ಪರಿಷತ್
ಸೇವೆ ಶ್ಲಾಘನೀಯ
ಸಂಸ್ಕಾರಯುತ ಶಿಕ್ಷಣ ವಿಶ್ವಕ್ಕೆ ಅಗತ್ಯ
ಸುವರ್ಣಾ ನದಿಯ ಪ್ರಶಾಂತ ಪರಿಸರದಲ್ಲಿರುವ ಪುತ್ತಿಗೆ ಗುರುಕುಲದ ಕಾರ್ಯಚಟುವಟಿಕೆ ಶ್ಲಾಘಿಸಿದ ಅಲೋಕ್ ಕುಮಾರ್, ಭಾರತದ ಪ್ರಾಚೀನ ಗುರುಕುಲ ಪರಂಪರೆಗೆ ಅನುಗುಣವಾಗಿ ಇಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಮತ್ತು ಜೀವನ ಮೌಲ್ಯ ತಿಳಿಸಲಾಗುತ್ತಿದೆ. ಜಗತ್ತಿಗೆ ಕೇವಲ ಉದ್ಯೋಗ ಒದಗಿಸುವ ಶಿಕ್ಷಣವಷ್ಟೇ ಸಾಲದು. ಉತ್ತಮ ಚಾರಿತ್ರ್ಯ, ವಿವೇಕ, ಕರುಣೆ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಬೆಳೆಸುವ ಶಿಕ್ಷಣ ಅತ್ಯಗತ್ಯ. ಬಾಲಕರೊಂದಿಗೆ ಬಾಲಕಿಯರಿಗೂ ಸಮಾನವಾಗಿ ಸಂಸ್ಕಾರಯುತ ಶಿಕ್ಷಣ ನೀಡಬೇಕು ಎಂದು ಪ್ರತಿಪಾದಿಸಿದರು.
ವಿಎಚ್ಪಿ ಪ್ರಾದೇಶಿಕ ಕಾರ್ಯದರ್ಶಿ ಶರಣ್ ಪಂಪ್ವೆಲ್, ದ.ಕ. ಜಿಲ್ಲಾ ಕಾರ್ಯಾಧ್ಯಕ್ಷ ಸುನೀಲ್ ಕೆ., ಉಡುಪಿ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಉಡುಪಿ ಜಿಲ್ಲಾ ಕಾರ್ಯದರ್ಶಿ ದಿನೇಶ್ ಮೆಂಡನ್, ಬಿಜೆಪಿ ಜಿಲ್ಲಾ ವಕ್ತಾರ ಮಧುಕರ್ ಮುದ್ರಾಡಿ, ಅರ್ಚಕ-ಪುರೋಹಿತ-ಮಠ-ಮಂದಿರ ಪ್ರಮುಖ್ ಗಿರೀಶ್ ತಂತ್ರಿ, ಶ್ರೀಗಳ ಆಪ್ತ ಕಾರ್ಯದರ್ಶಿ ರತೀಶ್ ತಂತ್ರಿ ಇನ್ನಿತರರು ಉಪಸ್ಥಿತರಿದ್ದರು.
ಸನಾತನ ಎಂದರೆ ಕೇವಲ ಪ್ರಾಚಿನ ಎಂದರ್ಥವಲ್ಲ. ತನ್ನ ಮೂಲತತ್ತ್ವ ಮತ್ತು ಶಾಶ್ವತ ಚೈತನ್ಯ ಉಳಿಸಿಕೊಂಡು ಕಾಲಕ್ಕನುಗುಣವಾಗಿ ನಿರಂತರ ವಿಕಸನಗೊಳ್ಳುವುದೇ ಸನಾತನ. ಅದು ಕಾಲದೊಂದಿಗೆ ಬದಲಾಗುತ್ತದೆ. ಆದರೆ, ಅದರ ಮೂಲಭಾವ ಸದಾ ಒಂದೇ ಆಗಿರುತ್ತದೆ. ಪ್ರತಿಯೊಬ್ಬರ ಸ್ವಭಾವ, ಅಭಿರುಚಿ, ಬುದ್ಧಿಮಟ್ಟ ಮತ್ತು ಆಧ್ಯಾತ್ಮಿಕ ಸ್ಥಿತಿಗೆ ಅನುಗುಣವಾಗಿ ಉಪಾಸನೆಯ ಮಾರ್ಗ ಆಯ್ಕೆಮಾಡುವ ಸ್ವಾತಂತ್ರ್ಯವನ್ನೂ ಸನಾತನ ಧರ್ಮ ನೀಡುತ್ತದೆ.
— ಅಲೋಕ್ ಕುಮಾರ್. ವಿಎಚ್ಪಿ ರಾಷ್ಟ್ರೀಯ ಅಧ್ಯಕ್ಷ.