ಮೇ 25ಕ್ಕೆ ನೀಲಾವರದಲ್ಲಿ ವಿಶ್ವೇಶ ತೀರ್ಥ ಸ್ಮೃತಿವನ ಲೋಕಾರ್ಪಣೆ

ಶ್ರೀ ವಿಶ್ವೇಶ ತೀರ್ಥ  ಸ್ಮೃತಿವನ
ಶ್ರೀ ವಿಶ್ವೇಶ ತೀರ್ಥ ಸ್ಮೃತಿವನ
Published on
ಉಡುಪಿ: ಅರಣ್ಯ ಇಲಾಖೆ ಹಾಗೂ ಶ್ರೀ ಪೇಜಾವರ ಮಠ ಸಹಯೋಗದಲ್ಲಿ ಬ್ರಹ್ಮಾವರ ತಾಲೂಕಿನ ನೀಲಾವರ ಗ್ರಾಮದಲ್ಲಿ ನೂತನವಾಗಿ ನಿಮಾರ್ಣಗೊಂಡಿರುವ ಶ್ರೀ ವಿಶ್ವೇಶ ತೀರ್ಥ ಸ್ಮೃತಿವನ ಉದ್ಘಾಟನಾ ಸಮಾರಂಭ ಮೇ 25ರಂದು 4:30ಕ್ಕೆ ನೆರವೇರಲಿದೆ.

ಪೇಜಾವರ ಮಠದ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಲಿದ್ದಾರೆ. ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ. ಖಂಡ್ರೆ ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಆರ್​. ಹೆಬ್ಬಾಳ್ಕರ್​ ಫೋಟೋ ಗ್ಯಾಲರಿ ಉದ್ಘಾಟಿಸಲಿದ್ದಾರೆ. ಶಾಸಕ ಯಶಪಾಲ್​ ಎ. ಸುವರ್ಣ ಅಧ್ಯಕ್ಷತೆ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ, ಬಿ. ವೈ. ರಾಘವೇಂದ್ರ , ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ. ಎ. ಗಫೂರ್​, ನಾರಾಯಣ ಗುರು ಅಭಿವೃದ್ಧಿ ನಿಗಮ ಅಧ್ಯಕ್ಷ ಮಂಜುನಾಥ ಪೂಜಾರಿ, ಶಾಸಕರಾದ ವಿ. ಸುನೀಲ್​ ಕುಮಾರ್​ , ಎಸ್​. ಎಲ್​. ಭೋಜೇಗೌಡ, ಗುರುರಾಜ್​ ಶೆಟ್ಟಿ ಗಂಟಿಹೊಳೆ , ಎ. ಕಿರಣ್​ ಕುಮಾರ್​ ಕೊಡ್ಗಿ , ಗುರ್ಮೆ ಸುರೇಶ್​ ಶೆಟ್ಟಿ , ಮಂಜುನಾಥ ಭಂಡಾರಿ, ಡಾ. ಧನಂಜಯ ಸರ್ಜಿ, ಕಿಶೋರ್​ ಕುಮಾರ್​ ಪುತ್ತೂರು ಮೊದಲಾದವರು ಉಪಸ್ಥಿತರಿರಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net